ದೊಡ್ಡಬಳ್ಳಾಪುರ: ತಾಲ್ಲೂಕಿನ ಸೊಮಶೆಟ್ಟಿಹಳ್ಳಿಯಲ್ಲಿ ಶ್ರೀಲಕ್ಷ್ಮೀ ಕರಗದಾಂಭ ದೇವಿ ಉತ್ಸವ ಹಾಗೂ ಶ್ರೀದೇವಿಯ ಕುಲಬಂಧು ಮಕ್ಕಳ ಕರ್ಣ ಭೂಷಣ ಮಹೋತ್ಸವ ಏ.17 ರಿಂದ 21ರವರೆಗೆ ನಡೆಯಲಿದೆ.

ಶುಕ್ರವಾರ ಅಂಕುರಾರ್ಪಣೆ ಕಂಬಶಾಸ್ತ್ರ ಹಾಗೂ ಕರಗದಾಂಭ ದೇವಿ ಪ್ರತಿಷ್ಠಾಪನೆ ನಡೆಯಲಿದೆ. 18ರಂದು ಆಂಜನೆಯ, ವೀರಭದ್ರ, ಬಸವೇಶ್ವರ, ಬೈರವೇಶ್ವರ, ಕಣಿವೆ ಬಸವಣ್ಣ ಮೂರ್ತಿಗಳಿಗೆ ಬೆಲ್ಲದ ಆರತಿ ಹಾಗೂ ಪೂಜಾ ನಡೆಯಲಿದೆ.

19 ರಂದು ಶ್ರೀಲಕ್ಷ್ಮೀ ಕರಗದಾಂಭ ದೇವಿ,ಬೇಲಿ ಮಾರಮ್ಮ, ನರಡಿ ಮಾರಮ್ಮ, ಪಟಾಲಮ್ಮ ದೇವಿ ಮೂರ್ತಿಗಳಿಗೆ ಆರತಿ ಮತ್ತು ಪೂಜಾ ಕಾರ್ಯಕ್ರಮ. 20 ರಂದು ನಾಗರ ಪೂಜೆ, ತವರಿನಿಂದ ಹೆಣ್ಣು ಮಕ್ಕಳಿಗೆ ಮಡಿಲು ತುಂಬುವುದು, ಗಂಗೆ ಪೂಜೆ ಮತ್ತು ಅರಿವಿ ಪೂಜೆ ಶಾಸ್ತ್ರ ಮತ್ತು ರಾತ್ರಿ ಸೊಸೆಯಂದರಿಗೆ ದೇವರು ಪಡೆಯುವ ಕಾರ್ಯಕ್ರಮ ನಡೆಯಲಿದೆ.

ಏ. 21 ರಂದು ಮಕ್ಕಳಿಗೆ ಕರ್ಣ ಭೂಷಣ ಮಹೋತ್ಸವ ನಂತರ ವೀರಗಾರರ ಕುಣಿತ ಹಾಗೂ ಸಂಜೆ ದೇವಿಯ ಹೊಳೆಗೆ ಹೋಗಿ ಬರುವ ಕಾರ್ಯಕ್ರಮ ನಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-15-611360601

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.