ದೊಡ್ಡಬಳ್ಳಾಪುರ: ಹಲವು ವರ್ಷಗಳ ಕಾರ್ಮಿಕರ ಹೋರಾಟದ ಫಲವಾಗಿ ನಿಗದಿತ ಸಂಬಳ, ವೇಳೆ ಮೂಲ ಸೌಕರ್ಯಗಳು ಜಾರಿಯಾದವು. ಆದರೆ ಇಂದಿನ ಮೋದಿ ಸರ್ಕಾರ ನವ ಉದಾರವಾದಿ ನೀತಿಗಳನ್ನು ಯಾವುದೇ ಅಳುಕಿಲ್ಲದೇ ಜಾರಿ ಮಾಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಹೇಳಿದರು.

ಸಿಐಟಿಯು ತಾಲ್ಲೂಕು ಸಂಚಾಲನಾ ಸಮಿತಿ ನೇತೃತ್ವದಲ್ಲಿ ನಗರದ ಸಿದ್ದಲಿಂಗಯ್ಯ ವೃತ್ತದ ಸ್ವಾತಂತ್ರ್ಯ ಹೋರಾಟಗಾರ ಎಚ್.ಮುಗುವಾಳಪ್ಪ ಪ್ರತಿಮೆ ಮುಂದೆ ಶುಕ್ರವಾರ ನಡೆದ 140ನೇ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.

29 ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ, ನಾಲ್ಕು ಸಂಹಿತೆಗಳನ್ನಾಗಿ ಮಾಡಿದೆ. ಈ ಮೂಲಕ ಕಾರ್ಮಿಕರ ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನು ಕಸಿದುಕೊಂಡಿದೆ ಎಂದರು.

ಕಾರ್ಮಿಕ ಸಂಹಿತೆ ಮೂಲಕ ಮಾಲೀಕರ 180 ಅಪರಾಧಗಳನ್ನು ಅಪರಾಧ ಮುಕ್ತಗೊಳಿಸಿದೆ. ಅದೇ ಸಮಯದಲ್ಲಿ ಕಾರ್ಮಿಕರು ಸಾಮೂಹಿಕ ಪ್ರತಿಭಟನೆ, ಕಾರ್ಮಿಕ ಸಂಘಗಳ ಮೂಲಕ ನೀಡುವ ದೂರುಗಳನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 111ರ ಪ್ರಕಾರ ಸಂಘಟಿತ ಅಪರಾಧವಾಗಿಸಿದೆ. ಕರಪತ್ರ ನೀಡುವುದು, ಸಭೆ ಸೇರುವುದು, ನೋಟೀಸ್ ನೀಡುವುದು, ಗುಂಪುಗೂಡಿ ಪ್ರಚಾರ ಮಾಡುವುದೂ ಕೂಡ ಸಂಘಟಿತ ಅಪರಾಧವಾಗಲಿದೆ ಎಂದು ತಿಳಿಸಿದರು.

ರಾಜ್ಯಗಳಲ್ಲಿನ ಶೇ 90.76 ಕಾರ್ಖಾನೆಗಳು ಮತ್ತು ರಾಷ್ಟ್ರಮಟ್ಟದ ಶೇ 96.86 ಕಾರ್ಖಾನೆಗಳು ಸರ್ಕಾರದ ಅನುಮತಿ ಇಲ್ಲದೇ ಲೇ ಆಫ್, ರಿಟ್ರೀಚ್ಮೆಂಟ್ ಹಾಗೂ ಮುಚ್ಚುವ ಮುಕ್ತ ಅವಕಾಶ ನೀಡಿದೆ. ಕಾಯಂ ಉದ್ಯೋಗದ ಬದಲಾಗಿ, ಗುತ್ತಿಗೆ ಪದ್ದತೆ ಮಾಡಿ, ಸಾಮಾಜಿಕ ಭದ್ರತೆಯ ಇಎಸ್ಐ, ಪಿಎಫ್, ನಿವೃತ್ತಿ ವೇತನ ಇತ್ಯಾದಿಗಳಿಂದ ಕಾರ್ಮಿಕರನ್ನು ಹೊರಗಿಡಲಾಗುತ್ತಿದೆ ಎಂದು ತಿಳಿಸಿದರು.

ಸಿ.ಪಿ.ಐ.ಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್.ಚಂದ್ರ ತೇಜಸ್ವಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಎಲ್.ಸಿ.ಸುಮಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅನಿಲ್ ಗುಪ್ತ, ಇಂಡೋಮಿಮ್ ಕಾರ್ಮಿಕ ಸಂಘದ ಖಜಾಂಚಿ ಮೋಹನ್ ರಾಜ್, ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ವರ್ಕರ್ಸ್ ಯೂನಿಯನ್ ಮನೀಶ್ ಶರ್ಮಾ, ಬೀರೇಂದ್ರ ಗುಪ್ತ, ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಕಾರ್ಯದರ್ಶಿ ಬಿ.ನರೇಶ್ಕುಮಾರ್, ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ತಾಲ್ಲೂಕು ಕಾರ್ಯದರ್ಶಿ ಏಜಾಜ್ ಪಾಷಾ, ಎಫ್.ಕೆ.ಎ.ಆರ್.ಡಿ.ಯು ಕೃಷ್ಣಮೂರ್ತಿ, ಸಿಪಿಐಎಂ ಪಕ್ಷದ ಕೆ.ರಘುಕುಮಾರ್, ಎಂ.ಚೌಡಯ್ಯ, ಜಿ.ನಟರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-15-1021385824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.