ದೊಡ್ಡಬಳ್ಳಾಪುರ: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿಯಲ್ಲಿ ಪ್ರಸ್ತಾಪಿಸಿರುವ ಎತ್ತಿನಹೊಳೆ ಅಣೆಕಟ್ಟು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕೇನಹಳ್ಳಿ ಭಾಗದಲ್ಲಿ ಉಳಿಕೆ ನೀರು ಸಂಗ್ರಹಕ್ಕೆ ಅಣೆಕಟ್ಟೆ ನಿರ್ಮಾಣವನ್ನು ವಿರೋಧಿಸಿ ರೈತರು ಗುರುವಾರ ನಗರದಲ್ಲಿ ಪ್ರತಿಭನೆ ನಡೆಸಿದರು.

ಎತ್ತಿನಹೊಳೆ ಯೋಜನೆಯ ಭಾಗವಾಗಿ ಸರ್ಕಾರ ಮುಂದಿಟ್ಟಿರುವ ಜಲಾಶಯ ನಿರ್ಮಾಣ, ಭೂಸ್ವಾಧೀನ ಹಾಗೂ ಸಂಬಂಧಿತ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಯೋಜನೆಯನ್ನು ಸಂಪೂರ್ಣ ರದ್ದುಪಡಿಸುವಂತೆ ನೊಂದ ರೈತರು ಮನವಿ ಮಾಡಿದರು.

ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ, ಗ್ರಾಮಗಳ ಅಸ್ತಿತ್ವ, ಪರಿಸರ ಹಾಗೂ ರೈತರ ಬದುಕಿಗೆ ಮಾರಕವಾಗಲಿದೆ ಎಂದ ಭೂಮಿ ಕಳೆದುಕೊಳ್ಳುತ್ತಿರುವ ಗ್ರಾಮಗಳ ರೈತರು, ಸ್ಥಳೀಯರ ಒಪ್ಪಿಗೆ ಪಡೆಯದೇ, ಗ್ರಾಮಸಭೆ ನಡೆಸದೇ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಅಧ್ಯಯನ ಕೈಗೊಳ್ಳದೇ ಸರ್ಕಾರ ಏಕಪಕ್ಷೀಯವಾಗಿ ಯೋಜನೆ ಮುಂದುವರಿಸುತ್ತಿದೆ ಎಂದು ಆರೋಪಿಸಿದರು.

ಬೈರಗೊಂಡ್ಲು ಭಾಗದಲ್ಲಿ ಸ್ಥಳೀಯರ ವಿರೋಧದ ಹಿನ್ನೆಲೆ ಜಲಾಶಯ ಯೋಜನೆ ಕೈಬಿಟ್ಟ ಸರ್ಕಾರ, ಇದೇ ರೀತಿಯ ವಿರೋಧ ಇದ್ದರೂ ವಡೇರಹಳ್ಳಿ ಹಾಗೂ ಲಕ್ಕೇನಹಳ್ಳಿ ಭಾಗದಲ್ಲಿ ಯೋಜನೆ ಮುಂದುವರಿಸುತ್ತಿರುವುದು ಅನ್ಯಾಯ ಹಾಗೂ ತಾರತಮ್ಯದಿಂದ ಕೂಡಿದೆ. ಬೈರಗೊಂಡ್ಲು ರೈತರು ಮಾತ್ರ ರೈತರೇ?, ನಮ್ಮ ವಿರೋಧಕ್ಕೆ ಬೆಲೆ ಇಲ್ಲವೇ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಯೋಜನೆಗೆ ಶೇ 100 ರಷ್ಟು ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ಭೂಸ್ವಾಧೀನಕ್ಕೆ ಒಪ್ಪುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.

‘ಯೋಜನೆ ಜಾರಿಯಾದರೆ ಸಾವಿರಾರು ರೈತ ಕುಟುಂಬಗಳ ಜೀವನೋಪಾಯ ಹಾಳಾಗುವುದರ ಜೊತೆಗೆ ಪರಿಸರ ಸಮತೋಲನಕ್ಕೂ ಧಕ್ಕೆಯಾಗಲಿದೆ. ತಮ್ಮ ಪೂರ್ವಿಕರ ಸಮಾಧಿಗಳು, ಗ್ರಾಮದೇವತೆಗಳ ಸ್ಥಳಗಳು, ಸಂಸ್ಕೃತಿ ಹಾಗೂ ಪರಂಪರೆಗೂ ಯೋಜನೆಯಿಂದ ಅಪಾಯ ಉಂಟಾಗಲಿದೆ. ನಮ್ಮ ಬದುಕಿನ ನೆಲೆಯನ್ನು ಕಿತ್ತುಕೊಂಡು ನಮ್ಮನ್ನು ಪರಾವಲಂಬಿಗಳನ್ನಾಗಿಸಲು ಸರ್ಕಾರ ಮುಂದಾಗಿದೆ. ನಾವು ಕಟ್ಟಿಕೊಂಡ ಬದುಕುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ’ ಎಂದರು.

ಈಗಾಗಲೇ ಪ್ರತಿಭಟನೆಗಳು, ಪತ್ರಿಕಾಗೋಷ್ಠಿಗಳು ಹಾಗೂ ವಿವಿಧ ಹಂತಗಳಲ್ಲಿ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಎತ್ತಿನಹೊಳೆ ಯೋಜನೆ ಸಂಬಂಧಿತ ಎಲ್ಲಾ ಪ್ರಕ್ರಿಯೆಗಳನ್ನು ತಕ್ಷಣ ನಿಲ್ಲಿಸಿ, ಡಿಪಿಆರ್, ಟೆಂಡರ್ ಪ್ರಕ್ರಿಯೆ, ಹಣಕಾಸು ವ್ಯವಹಾರಗಳು, ಪರಿಸರ ಅನುಮತಿಗಳು ಹಾಗೂ ಅಧಿಕಾರಿಗಳ ಪಾತ್ರದ ಕುರಿತು ಸ್ವತಂತ್ರ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಸಾಸಲು ಹೋಬಳಿಯಲ್ಲಿ 1,200 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.1,400 ಎಕರೆ ಪ್ರದೇಶದಲ್ಲಿ ತರಕಾರಿ, ಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕ ₹20 ಕೋಟಿಗೂ ಹೆಚ್ಚು ಅಡಿಕೆ ವಹಿವಾಟು ನಡೆಯುತ್ತಿದೆ. ₹10 ಕೋಟಿಗೂ ಹೆಚ್ಚು ರಾಗಿ, ಜೋಳ, ತರಕಾರಿ ಸೇರಿದಂತೆ ಇತರೆ ಬೆಳೆಗಳ ವಹಿವಾಟು ನಡೆಯುತ್ತದೆ ಎಂದು ರೈತರು ಮಾಹಿತಿ ನೀಡಿದರು.

ದಾಸರಪಾಳ್ಯ ರಾಮಣ್ಣ, ಗೋವಿಂದರಾಜು, ಕೆಂಪರಾಜು, ಲಕ್ಕಣ್ಣ, ಶ್ರೀರಾಮನಹಳ್ಳಿ ಅಶ್ವತ್ಥನಾರಾಯಣ, ಲಕ್ಷ್ಮೀನಾರಾಯಣ, ಲಕ್ಷ್ಮೀಕಾಂತ, ಲಕ್ಷ್ಮಮ್ಮ, ಗರುಡಗಲ್ಲು ಕೆಂಪಣ್ಣ, ಮಚ್ಚೇನಹಳ್ಳಿ ರಂಗಣ್ಣ, ಲಕ್ಕೇನಹಳ್ಳಿ ಬೈರಣ್ಣ, ಸಾಸಲು ಹನುಮಂತಯ್ಯ, ವಡೇರಹಳ್ಳಿ ವಸಂತಕುಮಾರ್ ನಂಜೇಗೌಡ ಸೇರಿದಂತೆ ನೂರಾರು ಜನ ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-17-1914009645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.