ದೊಡ್ಡಬೆಳವಂಗಲ(ದೊಡ್ಡಬಳ್ಳಾಪುರ): ‘ನಾವು ಜಮೀನು ಕೊಟ್ಟರೆ ನಾವು ಎಲ್ಲಿಗೆ ಹೋಗೋಣ. ನನ್ನ ತಂಗಿಯನ್ನ ಎಲ್ಲಿಗೆ ಕರೆದುಕೊಂಡು ಹೋಗಲಿ. ನಾವು ಹಸು ಎಲ್ಲಿ ಮೇಯಿಸೋಣ, ಹಾಲು ಎಲ್ಲಿಂದ ಬರುತ್ತದೆ. ನಿಮ್ಮ ದುಡ್ಡು ಬೇಡ, ನಮ್ಮ ಜಮೀನು ನಾವೇ ಮಡಗಿಕೊಳ್ಳುತ್ತೇವೆ...’

–ಕೆಐಎಡಿಬಿ ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನವೊಂದರ ಕುಟುಂಬದ ಪುಟ್ಟ ಬಾಲಕಿಯ ಮಾತುಗಳಿವು. ’ನಮ್ಮ ಭೂಮಿ ಯಾರಿಗೂ ಕೊಡುವುದು ಬೇಡ’ ಎಂದು ತನ್ನ ಅಜ್ಜನ ಎದುರು ಇಂಪನ ಎಂಬ ಪುಟ್ಟ ಬಾಲಕಿ ಹೇಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಲ್ಲೂಕಿನ ದೊಡ್ಡಬೆಳವಂಗಲ ಸುತ್ತಮುತ್ತ ಕೆಐಎಡಿಬಿ ವತಿಯಿಂದ ನಡೆಯುತ್ತಿರುವ 2,100 ಎಕರೆ ಭೂಸ್ವಾಧೀನ ವಿರೋಧಿಸಿ 15 ದಿನಗಳಿಂದ ನಾಡ ಕಚೇರಿ ಮುಂದೆ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಕುರಿತು ಊರಿನಲ್ಲಿ ಜನರು ಮಾತನಾಡುವುದನ್ನು ಕೇಳಿಸಿಕೊಂಡಿರುವ ಪುಟ್ಟ ಹುಡುಗಿ ಇಂಪನ ‘ನಮ್ಮ ಜಮೀನು ಕೊಡುವುದು ಬೇಡ’ ಎಂದು ತನ್ನ ಅಜ್ಜ ನಾರಾಯಣಪ್ಪ ಅವರಿಗೆ ಹೇಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ರೈತರ ಹೋರಾಟಕ್ಕೆ ಈ ದೃಶ್ಯ ಮಾನವೀಯ ಕಳಕಳಿಯ ಸ್ಪರ್ಷ ತಂದುಕೊಟ್ಟಿದೆ.

ವಿಡಿಯೊದಲ್ಲಿ ಬಾಲಕಿ ಇಂಪನ ‘ನಾವು ಹೋರಾಟಕ್ಕೆ ಬಂದಿದ್ದೇವೆ. ನಾವು ಜಮೀನು ಬಿಟ್ಟಕೊಡುವುದಿಲ್ಲ. ಜಮೀನು ನಮಗೆ ಬೇಕು. ನಾವು ಜಮೀನು ಕೊಟ್ಟರೆ ನಾವು ಎಲ್ಲಿಗೆ ಹೋಗೋಣ. ನಮ್ಮ ತಂಗಿನ ಎಲ್ಲಿಗೆ ಕರೆದುಕೊಂಡು ಹೋಗಲಿ. ನಾವು ಮೇಕೆ ಎಲ್ಲಿ ಮೇಯಿಸೋದು, ನಾವು ಹಸು ಎಲ್ಲಿ ಮೇಯಿಸೋಣ, ಹಾಲು ಎಲ್ಲಿಂದ ಬರುತ್ತದೆ. ನಮಗೆ ದುಡ್ಡು ಬೇಡ, ನಮ್ಮ ಜಮೀನು ನಾವೇ ಮಡಗಿಕೊಳ್ಳುತ್ತೇವೆ’ ಎಂದು ಹೇಳಿದ್ದಾಳೆ.

ಮನೆ ಮನೆಗೆ ಹೋರಾಟದ ಕಿಚ್ಚು: ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರಾನಹಳ್ಳಿ ಗ್ರಾಮಗಳು ಸೇರಿದಂತೆ ಈ ಭಾಗದ ಇತರೆ ಗ್ರಾಮಗಳಿಗು ಹೋರಾಟದ ಮಹತ್ವವನ್ನು ಮುಟ್ಟಿಸುವ ಸಲುವಾಗಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಮನೆ ಮನೆಗೂ ಕರಪತ್ರ ಹಂಚುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಧರಣಿಯಲ್ಲಿ ಭಾಗವಹಿಸುವಂತೆ ಪ್ರಚಾರ ನಡೆಸಲಾಗುತ್ತಿದೆ.

ಮನೆ ಮನೆಗೂ ಕರಪತ್ರ ಹಂಚುವ ಅಭಿಯಾನ ಆರಂಭವಾಗಿರುವುದರಿಂದ ಧರಣಿ ಸತ್ಯಾಗ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಭೂಸ್ವಾಧೀನ ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೋರಾಟ ಸಮಿತಿಯ ಪ್ರಭ ಬೆಳವಂಗಲ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-567841923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.