ದೊಡ್ಡಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ನಡೆಸುತ್ತಿರುವರಿಂದರಿಂದ ಭೂ ಮಾಪನ ಇಲಾಖೆಯ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದ ಭೂ ಮಾಪನ ಕಚೇರಿ ಸ್ತಬ್ಧವಾಗಿದೆ.

ಭೂ ಸರ್ವೆ, ಹದ್ದುಬಸ್ತ್, ಪೋಡಿ ಸೇರಿದಂತೆ ಇತರೆ ಕೆಲಸಗಳಿಗೆ ಸಲ್ಲಿಕೆಯಾಗಿರುವ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಭೂ ಮಾಪನ ಇಲಾಖೆ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ಜಮೀನು ಮಾರಾಟ, ಹಕ್ಕು ಬದಲಾವಣೆ ಎಲ್ಲಾ ಕೆಲಸಗಳಿಗೂ ತೊಡಕು ಉಂಟಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಅವರನ್ನು ಕೆಲಸಕ್ಕೆ ಹಾಜರಾಗುವಂತೆ ಮಾಡಬೇಕು. ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಕೆಸ್ತೂರು ಗ್ರಾಮ ರೈತ ರಮೇಶ್ಗೌಡ ಆಗ್ರಹಿಸಿದರು.

ಎರಡು ತಿಂಗಳಿಂದ ಭೂ ಮಾಪನ ಇಲಾಖೆಯಲ್ಲಿ ಜಮೀನು ಸರ್ವೆ, ಹದ್ದು ಬಸ್ತ್ , 11ಇ, ಪೋಡಿ, ದಾರಿ ನಕ್ಷೆಯ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ರೈತರ ಪಾಲಿಗೆ ಈ ಇಲಾಖೆ ಸತ್ತು ಹೋಗಿದೆ. ರೈತರ ಸಮಸ್ಯೆ ಯಾರೂ ಆಲಿಸುತ್ತಿಲ್ಲ. ಸರ್ವೆ ಇಲಾಖೆ ಈ ಸಮಸ್ಯೆಯಿಂದ ಜಮೀನುಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿಲ್ಲ. ನಮ್ಮ ತಾಲ್ಲೂಕಿನಲ್ಲಿ 2,000 ಸಾವಿರಕ್ಕೂ ಅಧಿಕ ಅರ್ಜಿಗಳ ವಿಲೇವಾರಿಯಾಗಬೇಕಿದೆ. ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ, ಮದುವೆ ಕಾರ್ಯಗಳಿಗೆ ಹಣ ಹೊಂದಿಸುವುದು ಕಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತರಾದ ನಾಗರಾಜು, ಶಶಿಕುಮಾರ್, ಉಮೇಶ್, ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-15-970927875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.