ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಗಾಜೋಗಹಳ್ಳಿ ಗ್ರಾ.ಪಂಗೆ ಮಹಿಳಾ ಸಾರಥ್ಯ

ಲಾಟರಿಗೆ ಒಲಿದ ಅಧ್ಯಕ್ಷ ಸ್ಥಾನ
Published : 23 ಸೆಪ್ಟೆಂಬರ್ 2024, 16:20 IST
Last Updated : 23 ಸೆಪ್ಟೆಂಬರ್ 2024, 16:20 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಕಲಾನಾಗರಾಜ್‌, ಉಪಾಧ್ಯಕ್ಷರಾಗಿ ಶೋಭಾಬಾಯಿಪ್ರಕಾಶ್‌ರಾವ್‌ ಆಯ್ಕೆಯಾದರು.

24 ಜನ ಸದಸ್ಯರನ್ನು ಹೊಂದಿರುವ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾನಾಗರಾಜ್‌, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಭಾಗ್ಯಮ್ಮ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶೋಭಾಬಾಯಿ ಪ್ರಕಾಶ್‌ರಾವ್‌, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ರೇಣುಕಾಚಂದ್ರಶೇಖರ್‌ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಗುಪ್ತ ಮತದಾನದಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 12 ಮತಗಳನ್ನು ಪಡೆದಿದ್ದರಿಂದ ಲಾಟರಿ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾನಾಗರಾಜ್‌ ಆಯ್ಕೆಯಾದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶೋಭಾಬಾಯಿಪ್ರಕಾಶ್‌ರಾವ್‌ 13 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಜಯಶ್ರೀನಂದೀಶ್, ಪ್ರಕಾಶ್, ಆನಂದಮ್ಮ ಮುನಿರಾಜು, ಮಮತಾಮಾರುತಿ, ಅಂಜಿನಮ್ಮರಂಗಪ್ಪ, ಜನಾರ್ಧನ್, ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ನಾಗೇಶ್‌, ಮುಖಂಡರಾದ ಜೆ.ವೈ.ಮಲ್ಲಣ್ಣ, ನಾಗರಾಜು, ಮಂಜುನಾಥ್, ಚಂದ್ರು, ಪರಮೇಶ್ವರಯ್ಯ, ಮನೋಜ್, ಗುರು, ಸುನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT