ದೊಡ್ಡಬಳ್ಳಾಪುರ: ಜಾತಿ, ಮತ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬ ಜೀವವನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿರುವ ದಾದಿಯರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ನಾವೆಲ್ಲರೂ ಸದಾ ಸ್ಮರಿಸಬೇಕಿದೆ ಎಂದು ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಹೇಳಿದರು.

ಶ್ರೀರಾಮ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದರು.

ಮೇ 12, 1820 ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಸುಶ್ರೂಷಕರಾಗಿ ನರ್ಸಿಂಗ್ ಶಿಕ್ಷಣಕ್ಕೊಂದು ಹೊಸ ದಾರಿ ಹಾಕಿಕೊಟ್ಟು ಶಿಸ್ತುಬದ್ಧ ಮತ್ತು ಪರಿಣಾಮಕಾರಿ ನರ್ಸಿಂಗ್ ತರಬೇತಿ ಆರಂಭ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಪ್ರತಿ ವರ್ಷ ಮೇ 12 ರಂದು ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿಗಾಗಿ ‘ಅಂತರರಾಷ್ಟ್ರೀಯ ದಾದಿಯರ ದಿನ’ವನ್ನು ಆಚರಿಸಲಾಗುತ್ತದೆ. ದಾದಿಯರ ದಣಿವರಿಯದ ಕಾಯಕ, ಅವರ ಅಚಲ ಸಹಾನುಭೂತಿ ಮತ್ತು ಅವರು ಸ್ಪರ್ಶಿಸುವ ಜೀವನದ ಮೇಲೆ ಅವರ ಆಳವಾದ ಪ್ರಭಾವವನ್ನು ನಾವು ಗುರುತಿಸಬೇಕಿದೆ’ ಎಂದರು.

‘ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ದಾದಿಯರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದನ್ನು ಜಗತ್ತು ಕಂಡಿದೆ. ನರ್ಸಿಂಗ್ ಎನ್ನುವುದು ಕೇವಲ ಒಂದು ಕೆಲಸವಲ್ಲ, ಅದೊಂದು ಜೀವನ ವಿಧಾನ. ರೋಗಿಗಳ ನೋವಿನಲ್ಲಿ ಸಾಂತ್ವನ ನೀಡುವ, ವೈದ್ಯರ ಚಿಕಿತ್ಸೆಗೆ ಜೀವ ತುಂಬುವ ಶಕ್ತಿ ದಾದಿಯರಲ್ಲಿದೆ. ಇಂದು ವೈದ್ಯಕೀಯ ಕ್ಷೇತ್ರ ಬಹಳ ಮುಂದುವರಿದಿದೆ. ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ರೋಗಿಯ ಜೊತೆ ನಗುಮುಖದಿಂದ ಮಾತನಾಡುವುದು ಅರ್ಧದಷ್ಟು ಕಾಯಿಲೆಯನ್ನು ವಾಸಿ ಮಾಡುತ್ತದೆ. ಈ ದಿಸೆಯಲ್ಲಿ ವಿನಯತೆ ಮತ್ತು ಕರುಣೆಯನ್ನು ಮೈಗೂಡಿಸಿಕೊಳ್ಳಿ. ನಮ್ಮ ವೃತ್ತಿಗೆ ನಿಷ್ಠರಾಗಿರುತ್ತೇವೆ ಮತ್ತು ಸಮಾಜದ ಆರೋಗ್ಯ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಸಂಕಲ್ಪ ಮಾಡಬೇಕಿದೆ’ ಎಂದರು.

ಸೂರ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಾಂಕ್, ಶ್ರೀರಾಮ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಎ.ರಾಜಿಮೋಲ್, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಅಚ್ಚಪ್ಪ, ಮಿಥುನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-15-1811568663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.