ದೊಡ್ಡಬಳ್ಳಾಪುರ: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್ಲೈನ್ ಮೂಲಕ ಔಷಧ ಮಾರಾಟವನ್ನು ವಿರೋಧಿಸಿ ದೇಶವ್ಯಾಪಿ ನಡೆದ ಬಂದ್ ಬೆಂಬಲಿಸಿ, ನಗರದಲ್ಲೂ ಬಹಳಷ್ಟು ಔಷಧಿ ಅಂಗಡಿಗಳು ಬುಧವಾರ ಬೆಳಗ್ಗೆ 11 ವರೆಗೆ ಔಷಧಿ ಅಂಗಡಿಗಳನ್ನು ಸಾಂಕೇತಿಕವಾಗಿ ಬಂದ್ ಮಾಡಿ, ಮುಷ್ಕರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದವು.

ದೇಶವ್ಯಾಪಿ ಔಷಧಿ ವ್ಯಾಪಾರ ಬಂದ್ ಕುರಿತು ಉಪವಿಭಾಗಾಧಿಕಾರಿಗಳಿಗೆ ಸಹ ಮಾಹಿತಿ ನೀಡಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕು ಆಡಳಿತದ ಸೂಚನೆ ಮೇರೆಗೆ ಬೆಳಗ್ಗೆ 7 ರಿಂದ 11 ವರೆಗೆ ಔಷಧಿ ಅಂಗಡಿಗಳನ್ನು ಸಾಂಕೇತಿಕವಾಗಿ ಬಂದ್ ಮಾಡಿ ಬೆಂಬಲ ನೀಡಲಾಯಿತು.

ದೇಶದಲ್ಲಿ ಸುಮಾರು 12.40 ಲಕ್ಷಕ್ಕೂ ಹೆಚ್ಚು ಔಷಧ ವ್ಯಾಪಾರಿಗಳಿದ್ದು, ಆನ್ಲೈನ್ ಪೋರ್ಟಲ್ಗಳ ಅನಿಯಂತ್ರಿತ ಕಾರ್ಯನಿರ್ವಹಣೆಯಿಂದ ಸಣ್ಣ ಹಾಗೂ ಮಧ್ಯಮ ಮಟ್ಟದ ಔಷಧ ಅಂಗಡಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇ-ಫಾರ್ಮಸಿ ಪೋರ್ಟಲ್ಗಳ ಭಾರಿ ಪ್ರಮಾಣದ ರಿಯಾಯಿತಿ ನೀಡಿ ಔಷಧ ಮಾರಾಟ ಮಾಡುತ್ತಿರುವುದು ಸ್ಥಳೀಯ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ ಎಂದು ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಡಿ.ಶ್ಯಾಮ್ ಸುಂದರ್ ತಿಳಿಸಿದರು.

ಕೋವಿಡ್-19 ಸಮಯದಲ್ಲಿ ಜಾರಿಯಾದ ತಾತ್ಕಾಲಿಕ ಆದೇಶಗಳನ್ನು ದುರುಪಯೋಗಪಡಿಸಿಕೊಂಡು ಇ-ಫಾರ್ಮಸಿ ಕಂಪನಿಗಳು ವ್ಯಾಪಾರ ವಿಸ್ತರಣೆ ಮಾಡಿಕೊಂಡಿವೆ. ಅನಿಯಂತ್ರಿತ ಆನ್ಲೈನ್ ಔಷಧ ಮಾರಾಟದಿಂದ ರೋಗನಿರೋಧಕ ಔಷಧಿಗಳ ದುರ್ಬಳಕೆ ಹೆಚ್ಚಾಗಿ ಅಡ್ಡ ಪರಿಣಾಮಗಳ ಸಮಸ್ಯೆ ತೀವ್ರವಾಗುತ್ತಿವೆ ಎಂದರು.

ವೈದ್ಯರ ಸಲಹೆ ಇಲ್ಲದೆ ಔಷಧ ಲಭ್ಯವಾಗುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆನ್ಲೈನ್ ಔಷಧಿ ಮಾರಾಟದಿಂದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ವೈದ್ಯರು ನೀಡುವ ಚೀಟಿ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಇ-ಫಾರ್ಮಸಿ ನಿಯಂತ್ರಣಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-15-881203229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.