ದೊಡ್ಡಬಳ್ಳಾಪುರ:ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಮೇ 20 ರಂದು ದೇಶವ್ಯಾಪಿ ಕರೆ ನೀಡಿರುವ ಬಂದ್ ಅನ್ನು ಬೆಂಬಲಿಸಲಾಗುವುದು ಎಂದು ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಡಿ.ಶ್ಯಾಮ್ ಸುಂದರ್ ತಿಳಿಸಿದ್ದಾರೆ.

ಸಂಘದ ವತಿಯಿಂದ ನಗರದ ಉಪವಿಭಾಗಾಧಿಕಾರಿಗೆ ಸೋಮವಾರ ನವಿ ಸಲ್ಲಿಸಿದ ನಂತರ ಬಂದ್ ಕುರಿತು ಮಾಹಿತಿ ನೀಡಿದ ಅವರು, ದೇಶದಲ್ಲಿ ಸುಮಾರು 12.40 ಲಕ್ಷಕ್ಕೂ ಹೆಚ್ಚು ಔಷಧ ವ್ಯಾಪಾರಿಗಳಿದ್ದು, ಆನ್ಲೈನ್ ಪೋರ್ಟಲ್ಗಳ ಅನಿಯಂತ್ರಿತ ಕಾರ್ಯನಿರ್ವಹಣೆಯಿಂದ ಸಣ್ಣ ಹಾಗೂ ಮಧ್ಯಮ ಮಟ್ಟದ ಔಷಧ ಅಂಗಡಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಇ-ಫಾರ್ಮಸಿ ಪೋರ್ಟಲ್ಗಳು ಭಾರಿ ಪ್ರಮಾಣದ ರಿಯಾಯಿತಿ ನೀಡಿ ಔಷಧ ಮಾರಾಟ ಮಾಡುತ್ತಿರುವುದು ಸ್ಥಳೀಯ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ. ವೈದ್ಯರು ನೀಡುವ ಚೀಟಿ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಅನಿಯಂತ್ರಿತ ಆನ್ಲೈನ್ ಔಷಧ ಮಾರಾಟದಿಂದ ರೋಗನಿರೋಧಕ ಔಷಧಿಗಳ ದುರ್ಬಳಕೆ ಹೆಚ್ಚಾಗಿ ಅಡ್ಡ ಪರಿಣಾಮದಗಳ ಸಮಸ್ಯೆ ತೀವ್ರವಾಗುತ್ತಿವೆ. ವೈದ್ಯರ ಸಲಹೆ ಇಲ್ಲದೆ ಔಷಧ ಲಭ್ಯವಾಗುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಆನ್ಲೈನ್ ಔಷಧಿ ಮಾರಾಟದಿಂದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಇ-ಫಾರ್ಮಸಿ ನಿಯಂತ್ರಣಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್ ‘ಔಷಧಿ ಮಾರಾಟ ಮಳಿಗೆಗಳ ಬಂದ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ಹಾಗೂ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್.ಸಿ.ಪಟಾಲಯ್ಯ, ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಡಿ.ಎಸ್.ಸಿದ್ದಣ್ಣ, ಕಾರ್ಯದರ್ಶಿ ಸಿ.ರಜನೀಶ್, ಖಜಾಂಚಿ ರಹೀಂಖಾನ್, ಉಪಾಧ್ಯಕ್ಷ ಚಂದ್ರಣ್ಣ, ಕೆ.ಎಸ್.ಅಭಿಜಿತ್, ಮುರಳಿ, ಚಂದ್ರಶೇಖರ್, ರಂಗನಾಥ್, ರಾಮಕೃಷ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-15-2058527268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.