ದೊಡ್ಡಬಳ್ಳಾಪುರ: ತಾಲ್ಲೂಕಿನ ಆರೂಢಿ ಗ್ರಾಮದ ಸಮೀಪ ಗುರುವಾರ ವಿದ್ಯುತ್ ಪರಿವರ್ತಕದಲ್ಲಿ (ಟಿ.ಸಿ) ಕಾಣಿಸಿಕೊಂಡ ಕಿಡಿ ಪಕ್ಕದ ಜಮೀನಿಗೆ ವ್ಯಾಪಿಸಿ ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಬೆಳೆದಿದ್ದ ಮಾವು, ಅಡಿಕೆ, ತೆಂಗು, ಜಂಬು ನೇರಳೆ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಗಳೂರಿನ ನಾಗರಾಜು ಎಂಬುವರಿಗೆ ಸೇರಿದ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಂಬು ನೇರಳೆ ಮರಗಳು ಬೆಂಕಿಗೆ ಆಹುತಿಯಾಗಿವೆ.

ಸುಮಾರು ₹5 ಲಕ್ಷ ಮೌಲ್ಯದ ಮಾವು, ಐದು ಸಾವಿರ ಅಡಿಕೆ ಗಿಡ, ನಾಲ್ಕು ಸಾವಿರ ಜಂಬು ನೇರಳೆ ಮರ, ನಾಲ್ಕು ನೂರಕ್ಕೂ ಹೆಚ್ಚು ತೆಂಗಿನ ಮರ ಸುಟ್ಟು ಕರಕಲಾಗಿವೆ. ಜೊಎತೆಗೆ ₹5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕದ ಪೈಪ್ಲೈನ್ ಭಸ್ಮವಾಗಿದೆಎಂದು ಜಮೀನು ಮಾಲೀಕ ನಾಗರಾಜು ತಿಳಿಸಿದ್ದಾರೆ.

ಘಟನೆ ನಡೆದಿರುವುದೇ ಗೊತ್ತಿಲ್ಲ: ಈ ಬಗ್ಗೆ ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳಗ್ಗೆ 9.30ಕ್ಕೆ ಘಟನೆ ನಡೆದದ್ದು, ಮಾಧ್ಯಮವರು ತಿಳಿಸುವವರೆಗೂ ಮಾಹಿತಿ ಗೊತ್ತಾಗಿಲ್ಲ. ಕೂಡಲೇ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-15-1665473856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.