ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ತೊಟ್ಟಿಯಾಗಿರುವ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಸ್ಥಳೀಯರು, ವಿವಿಧ ಸಂಘಟನೆಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಈಗ ಕಾರ್ಯನಿರ್ವಹಿಸುತ್ತಿರುವ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ಕೂಗಳತೆ ದೂರದಲ್ಲೇ ಇದ್ದ ಟೆರ್ರಾ ಫಾರ್ಮ್ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಳೀಯರ ಸತತ ಹೋರಾಟದ ಫಲವಾಗಿ 2015ರಲ್ಲಿ ಬಂದ್ ಮಾಡಲಾಗಿತ್ತು.

ಖಾಸಗಿ ಒಡೆತನದಲ್ಲಿ ಇದ್ದ ಟೆರ್ರಾ ಫಾರ್ಮ್ ಜಮೀನು ಹಾಗೂ ಸರ್ಕಾರಿ ಜಮೀನು ಸೇರಿದಂತೆ ಸುಮಾರು 100 ಎಕರೆ ಪ್ರದೇಶದಲ್ಲಿ ಮತ್ತೆ ಟೆರ್ರಾ ಫಾರ್ಮ್ ಕಸ ವಿಲೇವಾರಿ ಘಟಕವನ್ನು ಬಿಬಿಎಂಪಿ ವತಿಯಿಂದಲೇ ನಿರ್ವಹಣೆ ಮಾಡಲು ಎಲ್ಲಾ ಸಿದ್ಧತೆ ಆರಂಭವಾಗಿವೆ. ಈಗಾಗಲೇ ಬಿಬಿಎಂಪಿ 52 ಎಕರೆ ಭೂಮಿಯನ್ನು ಸರ್ಕಾರದಿಂದ ಅಧಿಕೃತವಾಗಿ ಪಡೆದಿದೆ.

ಈ ಎರಡೂ ಕಸ ವಿಲೇವಾರಿ ಘಟಕಗಳಿಗೂ ಬೆಂಗಳೂರಿನಿಂದ ಪೂರ್ಣ ಪ್ರಮಾಣದಲ್ಲಿ ಕಸ ತುಂಬಿದ ಲಾರಿಗಳು ಬರಲು ಆರಂಭವಾದರೆ ಸಾಸಲು ಹೋಬಳಿಯ ಸುಮಾರು 10 ಗ್ರಾಮಗಳು ಹಾಗೂ ದೊಡ್ಡಬೆಳವಂಗಲ ಹೋಬಳಿಯ ಸುಮಾರು ಎಂಟು ಗ್ರಾಮಗಳ ಜನರು ಗ್ರಾಮಗಳನ್ನು ತೊರೆಯಬೇಕಾಗುತ್ತದೆ ಎನ್ನುವುದು ಸ್ಥಳೀಯರ ಆತಂಕ.

2007ರಲ್ಲಿ ಟೆರ್ರಾ ಫಾರ್ಮ್ ಬಿಬಿಎಂಪಿ ಕಸ ವಿಲೇವಾರಿ ಘಟಕ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಗ್ರಾಮಗಳ ರಸ್ತೆ, ಚರಂಡಿ ಇತರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಬಿಬಿಎಂಪಿ ಅನುದಾನ ನೀಡುತ್ತಿತ್ತು. ಆದರೆ ಕಸದ ಹಾವಳಿ ಹೆಚ್ಚಾದ ನಂತರ ಹಾಗೂ ಈ ಭಾಗದಲ್ಲಿ ಅಂತರ್ಜಲ ಕಲುಷಿತವಾಗಿದ್ದರಿಂದ ಬಿಬಿಎಂಪಿ ಅನುದಾನವೂ ಬೇಡ, ಕಸವೂ ಬೇಡ ಎನ್ನುವ ಸ್ಥಳೀಯರ ಕೂಗು ಗಟ್ಟಿಯಾಗಿತ್ತು. ಜನರ ಕೂಗಿಗೆ 2023ರಿಂದ ಈಚೆಗೆ ಮಾನ್ಯತೆ ದೊರೆಯಿತು.

ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಬಿಬಿಎಂಪಿ ಅನುದಾನ ತಿರಸ್ಕರಿಸಲಾಗಿದೆ ಎಂದು ಶನಿವಾರ ಶಾಸಕ ಧೀರಜ್ ಮುನಿರಾಜು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಕಸ ವಿಲೇವಾರಿ ಘಟಕ ಬಂದ್ ಮಾಡಿಸುವಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಶಾಶ್ವತ ಪರಿಹಾರ ಸಿಗಲಿ

ನಮ್ಮ ತಾಲ್ಲೂಕು ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಯಾವುದೇ ಸ್ಥಳದಲ್ಲೂ ಬಿಬಿಎಂಪಿ ಕಸ ತಂದು ಸುರಿಯುವುದು ಖಂಡನೀಯ. ವೈಜ್ಞಾನಿಕ ಕಸ ವಿಲೇವಾರಿಗೆ ಹತ್ತಾರು ರೀತಿಯ ತಂತ್ರಜ್ಞಾನ ವಿದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿವೆ. ಆದರೆ ಬಿಬಿಎಂಪಿ ಕಸ ವಿಲೇವಾರಿ ವಿಚಾರದಲ್ಲಿ ತಕ್ಷಣದ ಸಮಸ್ಯೆ ಪರಿಹಾರಕ್ಕೆ ಮಾತ್ರವೇ ಪ್ರಾಮುಖ್ಯತೆ ನೀಡುತ್ತ ಬಂದಿದೆಯೇ ವಿನಃ ಶಾಶ್ವತ ಪರಿಹಾರದ ಕಡೆಗೆ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ.

ನಮ್ಮ ತಾಲ್ಲೂಕನ್ನು ಕಸದ ತೊಟ್ಟಿಯಾಗಿಸುತ್ತಿರುವುದರ ವಿರುದ್ಧದ ಪಕ್ಷಾತೀತ ಹೋರಾಟ ನಡೆಯಬೇಕು. ಎಲ್ಲ ಸಂಘಟನೆಗಳನ್ನು ಒಳಗೊಂಡ ಹೋರಾಟ ಸಮಿತಿ ರಚಿಸಿಕೊಂಡು ವ್ಯವಸ್ಥಿತವಾಗಿ ಮುನ್ನಡೆದರೆ ಮಾತ್ರ ಕಸವನ್ನು ತಡೆಯಲು ಸಾಧ್ಯ. ಈ ಹಿಂದಿನ ಹೋರಾಟಗಳು ವಿಫಲವಾಗಿರುವುದು ಪಕ್ಷಾತೀತ ಹೋರಾಟ ಸಮಿತಿ ಇಲ್ಲದೇ, ವ್ಯಕ್ತಿ ಕೇಂದ್ರಿತವಾಗಿರುವುದೇ ಕಾರಣ.

-ರುದ್ರಾಆರಾಧ್ಯ, ಸಿಪಿಐಎಂ, ತಾಲ್ಲೂಕು ಕಾರ್ಯದರ್ಶಿ.

ದೃಢ ಸಂಕಲ್ಪ ಬೇಕು

ಬಿಬಿಎಂಪಿ ಕಸ ಎನ್ನುವುದು ಈಗ ಬರೀ ಕಸವಾಗಿ ಮಾತ್ರ ಉಳಿದಿಲ್ಲ. ದೊಡ್ಡ ಪ್ರಮಾಣದ ಗುತ್ತಿಗೆ ವ್ಯವಹಾರವಾಗಿಯು ಮಾರ್ಪಟ್ಟಿರುವುದು ಎಲ್ಲರಿಗು ತಿಳಿದಿರುವ ಸತ್ಯ. ಈ ಹಿಂದೆ ಹಲವಾರು ಬಾರಿ ಕಸದ ವಿರುದ್ಧ ಹೋರಾಟ ನಡೆದಿವೆ. ಆದರೆ ನಿರೀಕ್ಷಿತ ಫಲ ಮಾತ್ರ ಇಲ್ಲ. ಈಗ ಮತ್ತೆ ಶಾಸಕರು ಕಸ ಕಂಟಕದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ತಾಲ್ಲೂಕಿನ ಜ್ವಲಂತ ಸಮಸ್ಯೆಯಾಗಿರುವ ಕಸದ ವಿರುದ್ಧ ಯಾರೇ ಪ್ರಾಮಾಣಿಕ ಹೋರಾಟ ನಡೆಸಿದರೂ ನಮ್ಮ ಬೆಂಬಲ ಇರಲಿದೆ. ಆದರೆ ದೃಢಸಂಕಲ್ಪ ಮುಖ್ಯ.

-ಮುತ್ತೇಗೌಡ, ಜಿಲ್ಲಾ ಮುಖಂಡ, ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.