ಸಚಿವನಾಗಲು ಮನೆಬಾಗಿಲಿಗೆ ಹೋಗಿಲ್ಲ

7
ಆನೇಕಲ್ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಕಾರ್ಯಕರ್ತರ ಅಭಿನಂದನಾ ಸಮಾರಂಭ

ಸಚಿವನಾಗಲು ಮನೆಬಾಗಿಲಿಗೆ ಹೋಗಿಲ್ಲ

Published:
Updated:
ಅತ್ತಿಬೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನು ಶಾಸಕ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು

‌ಆನೇಕಲ್: ‘ಸಚಿವನಾಗಬೇಕೆಂದು ಯಾರ ಮನೆಯ ಬಾಗಿಲಿಗೂ ಹೋಗಿಲ್ಲ. ಏಳು ಬಾರಿ ಚುನಾವಣೆಯಲ್ಲಿ ಜಯ ಗಳಿಸಿದ್ದೇನೆ. ನಮ್ಮ ಅನುಭವ ಹಾಗೂ ಹಿರಿತನವನ್ನು ಬಳಸಿಕೊಳ್ಳುವುದು ಬಿಡುವುದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು. ಯಾವುದೇ ಜವಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಪರಿಪಾಠ ನನ್ನದಾಗಿದೆ’ ಎಂದು ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಆನೇಕಲ್ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ದಿ ಕಾರ್ಯಗಳಿಂದ ಆನೇಕಲ್‌ನಲ್ಲಿ ಎರಡನೇ ಬಾರಿ ಶಿವಣ್ಣ ಗೆಲವು ಸಾಧಿಸಿದ್ದಾರೆ. ಆದರೇ ಚುನಾವಣೆಯಲ್ಲಿ ಕಡಿಮೇ ಅಂತರದ ಗೆಲವು ಸಿಕ್ಕಿದೆ. ಅಭಿವೃದ್ದಿಗೆ ಶ್ರಮಿಸಿದವರನ್ನು ಮತದಾರರು ಹೆಚ್ಚಿನ ಮತಗಳನ್ನು ನೀಡಬೇಕಾಗಿತ್ತು. ಚುನಾವಣೆಗಳಲ್ಲಿ ಏರಿಳಿತಗಳು ಸಹಜ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ರನ್ನು ಗೆಲ್ಲಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ನಿರೀಕ್ಷೆಯಂತೆ ಆನೇಕಲ್‌ನಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕು ಎಂದು ಹಗಲು ರಾತ್ರಿ ದುಡಿದ ಕಾರ್ಯಕರ್ತರ ಮತ್ತು ಮುಖಂಡರ ಪರಿಶ್ರಮದ ಫಲವಾಗಿ ಎರಡನೇ ಬಾರಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಸ್ಥಾನಗಳನ್ನು ಕೊಡಲಿಲ್ಲ. ಇದಕ್ಕೆ ಜಾತ್ಯತೀತ ತತ್ವ ಗನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಸಮ್ಮಿಶ್ರ ಸರ್ಕಾರವನ್ನು ಮಾಡಿದ್ದೇವೆ’ ಎಂದರು.

‘2013ರ ಚುನಾವಣೆಯಲ್ಲಿ 40 ಸಾವಿರಕ್ಕಿಂತಲೂ ಹೆಚ್ಚಿನ ಅಂತರದಿಂದ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿರಬಹುದು. ಇದಕ್ಕೆ ಅಧಿಕಾರ ಜಾತಿ, ಧರ್ಮ ಮತ್ತು ನಮ್ಮಲ್ಲೇ ಇದ್ದು ಕೆಲವರು ದ್ರೋಹ ಬಗೆದಿರುವುದು ಕಡಿಮೆ ಮತಗಳು ಬರಲು ಕಾರಣವಾಗಿಬಹುದು. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದರೂ ಹಿನ್ನಡೆಗೆ ಕಾರಣವೇನು. ಅಭಿವೃದ್ದಿ ಬೇಕೇ ಅಥವಾ ಜಾತಿ ಧರ್ಮ ಬೇಕೇ ಎಂಬುದನ್ನು ಜನರೇ ತಿರ್ಮಾನಿಸಬೇಕಾಗಿದೆ’ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪ್ರತಿವರ್ಷ ಮೂರು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ಬದಲಾಗಿ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಜನತೆ ಸೇವೆ ಸಲ್ಲಿಸಲು ಎರಡನೇ ಬಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾರ್ಯಕರ್ತರು ಹಾಗೂ ಮುಖಂಡರ ಪರಿಶ್ರಮದಿಂದ ಮಾತ್ರ ಈ ಗೆಲುವು ಸಾಧ್ಯವಾಗಿದೆ. ಅಭಿವೃದ್ಧಿಯ ಗುರಿಯೊಂದಿಗೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಲಾಗವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಬಮುಲ್ ನಿರ್ದೇಶಕ ಆರ್.ಕೆ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಪ್ಪ, ರಾಜಣ್ಣ, ಪುರಸಭಾ ಅಧ್ಯಕ್ಷ ಶಂಕರ್‌ಕುಮಾರ್, ಮುಖಂಡರಾದ ಪಟಾಪಟ್ ನಾಗರಾಜು, ದೊಡ್ಡಹಾಗಡೆ ಹರೀಶ್, ಅಚ್ಯುತರಾಜು, ಗಟ್ಟಹಳ್ಳಿ ಸೀನಪ್ಪ, ಬಳ್ಳೂರು ಮುನಿವೀರಪ್ಪ, ನಾರಾಯಣಸ್ವಾಮಿ, ರಾಮಚಂದ್ರರೆಡ್ಡಿ, ದೊರೆಸ್ವಾಮಿ, ಪುಷ್ಪರಾಜು, ಬೊಮ್ಮಸಂದ್ರ ಪ್ರಸಾದ್, ಶಂಭಯ್ಯ, ಶ್ರೀರಾಮ್, ಸ್ವಾತೇಗೌಡ, ಕೇಶವರೆಡ್ಡಿ, ಬಾಬುರೆಡ್ಡಿ, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !