ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನೆಗೆ ಬಿಜೆಪಿ ಅಭಿಯಾನ

Last Updated 15 ಮಾರ್ಚ್ 2023, 5:01 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಖಾಜಿಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತರಬಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಬಿಜೆಪಿ ಸಾಧನೆ ಅಭಿಯಾನ ನಡೆಯಿತು.

ಬಿಜೆಪಿ ಮುಖಂಡ ತರಬಹಳ್ಳಿ ಟಿ.ವೈ. ಮಂಜುನಾಥ್‌ ಮಾತನಾಡಿ, ‘2004ಕ್ಕೂ ಮೊದಲು ಹೊಸಕೋಟೆಯಲ್ಲಿ ಆಡಳಿತ ನಡೆಸಿದ ರಾಜಕೀಯ ಮುಖಂಡರು ಕ್ಷೇತ್ರದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡಿಕೊಂಡು ಜನರನ್ನು ಹೆದರಿಸಿ ಅಧಿಕಾರ ಮಾಡುತ್ತಿದ್ದರು’ ಎಂದು ಆರೋಪಿಸಿದರು.

ಅಂಬೇಡ್ಕರ್‌ ರಚಿಸಿದ ಸಂವಿಧಾನದ ಆಶಯದಡಿ ಕೊಟ್ಟಿರುವ ಮತದಾನದ ಹಕ್ಕನ್ನೂ ಕಿತ್ತುಕೊಂಡಿದ್ದರು. ದಲಿತರು ಅವರ ಕೈಗೊಂಬೆಗಳಾಗಿ ಬದುಕಬೇಕಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಎಂ.ಟಿ.ಬಿ. ನಾಗರಾಜ್‌ 2004ರಲ್ಲಿ ಹೊಸಕೋಟೆಗೆ ಬಂದರು. ಈ ದೌರ್ಜನ್ಯಕ್ಕೆ ಕಡಿವಾಣ ಹಾಕಿದರು. ಕ್ಷೇತ್ರದಲ್ಲಿ ಈಗ ಶಾಂತಿ, ಸುವ್ಯವಸ್ಥೆ ನೆಲೆಸಿದೆ ಎಂದರು.

ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಮಾತನಾಡಿ, ‘2004ರಲ್ಲಿ ಕ್ಷೇತ್ರಕ್ಕೆ ಬಂದಾಗ ಪ್ರೀತಿ, ವಿಶ್ವಾಸ ಕೊಟ್ಟು ಪ್ರಥಮ ಬಾರಿಗೆ ಗೆಲುವಿನ ಮಾಲೆಯನ್ನು ಕೊರಳಿಗೆ ಹಾಕಿದ್ದೀರಿ. ಆದ್ದರಿಂದಲೇ ನಿಮ್ಮ ಋಣ ತೀರಿಸುವ ಕೆಲಸವನ್ನು ಪಕ್ಷಾತೀತವಾಗಿ ಮಾಡಿದ್ದಾರೆ. ಇನ್ನು ಮುಂದೆಯೂ ಎಂಟಿಬಿ ನಾಗರಾಜ್‌ ಅವರ ಮಾರ್ಗದರ್ಶನದಡಿ ಕ್ಷೇತ್ರದ ಜನರ ಅಬಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಅತ್ತಿಬೆಲೆ ರಘುವೀರ್, ಕೋಡಿಹಳ್ಳಿ ಜಾನಿ, ಹೇಮಾ ಮಂಜುನಾಥ್, ಮುರಳಿ, ಜೆಸಿಬಿ ಮಂಜುನಾಥ್, ಸುರೇಶ್, ವಿಜಿ, ಮುನಿಕೃಷ್ಣ ಬಾಬು, ಪ್ರದೀಪ್, ಜಗದೀಶ್, ಬೀರಪ್ಪ, ಯಲ್ಲರಾಜು, ರಾಜು, ಪ್ರದೀಪ್‌ ಕುಮಾರ್, ಕೃಷ್ಣ, ಲಕ್ಷ್ಮಣ್, ನಾರಾಯಣಸ್ವಾಮಿ, ಮಾದಪ್ಪ, ಚಂದ್ರಪ್ಪ, ಯಲ್ಲಪ್ಪ, ಮಗ್ಗಪ್ಪ, ಪ್ರೇಮ್‌ ಸಾಗರ್, ಚಂದ್ರು, ಸುದೀಪ್, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT