ಸಮೇತನಹಳ್ಳಿ(ಹೊಸಕೋಟೆ): ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡವತ್ತಿ ಗ್ರಾಮದಲ್ಲಿ 20ನೇ ವರ್ಷದ ದ್ರೌಪದಂಬಾ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ದ್ರೌಪದಾಂಭಾ ದೇವಾಲಯದಿಂದ ಭಾನುವಾರ ಮಧ್ಯರಾತ್ರಿ 12 ಘಂಟೆ 10 ನಿಮಿಷಕ್ಕೆ ಹೊರಟ ಹೂವಿನ ಕರಗ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮವಾರ ಬೆಳಗ್ಗೆ ಸುಮಾರು 10 ಘಂಟೆ ಸಮಯಕ್ಕೆ ದೇವಾಲಯ ತಲುಪಿ ಹೂವಿನ ಕರಗವನ್ನು ಇಳಿಸಲಾಯಿತು.

ಕರಗದ ಪ್ರಯುಕ್ತ ಗ್ರಾಮದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಸಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ವಸಂತ್ ಕುಮಾರ್ ಹೂವಿನ ಕರಗ ಹೊತ್ತು ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ, ಕನಕಾಂಬರ ಹೂವುಗಳಿಂದ ಕಂಗೋಳಿಸುತ್ತಿದ್ದ ‘ಕರಗ’ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಗ್ರಾಮದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಗ್ರಾಮ ದೇವರ 11 ಕ್ಕೂ ಹೆಚ್ಚು ಪಲ್ಲಕ್ಕಿಗಳ ಜೊತೆ ಹೆಜ್ಜೆ ಹಾಕಿದ ಕಲಾ ತಂಡಗಳ ವಾದ್ಯದ ಸದ್ದಿಗೆ ಕರಗದ ಪೂಜಾರಿ ನೃತ್ಯವು ಭಕ್ತರಲ್ಲಿ ದೈವತ್ವ ಕಣ್ತುಂಬಿಕೊಂಡಂತೆ ಎಲ್ಲೆಡೆ ಕಾಣುತ್ತಿತ್ತು.

ವೆಂಕಟರಮಣಪ್ಪ, ಜಯರಾಮಪ್ಪ, ರಮೇಶ್, ಶಿವಕುಮಾರ್, ಮುನಿಕೃಷ್ಣ, ನಾಗರಾಜಪ್ಪ, ನಟರಾಜ್, ವಿಜಯ್ ಕುಮಾರ್, ಲಕ್ಷಿ ನಾರಾಯಣ್, ಟಿಡಿಬಿ ಮಂಜುನಾಥ್, ಟಿಡಿಬಿ ರವಿ, ಎನ್ .ವಿ.ಶ್ರೀನಿವಾಸ್, ಸ್ಟುಡಿಯೋ ನವರಾಜ್, ಮಂಜುನಾಥ್, ವಿಜಯ್ ಕುಮಾರ್, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.