ಶೌಚಾಲಯಕ್ಕೂ ನೀರಿಲ್ಲದ ಸರ್ಕಾರಿ ಶಾಲೆ!

7
ಕರ್ತವ್ಯ ಪ್ರಜ್ಞೆ ಮರೆತ ಅಧಿಕಾರಿಗಳು, ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳು – ಆಕ್ರೋಶ

ಶೌಚಾಲಯಕ್ಕೂ ನೀರಿಲ್ಲದ ಸರ್ಕಾರಿ ಶಾಲೆ!

Published:
Updated:
Deccan Herald

ದೇವನಹಳ್ಳಿ: ಪಾಳು ಬಿದ್ದಿರುವ ಕಟ್ಟಡ, ಬಿರುಕು ಗೋಡೆ. ಬಳಕೆಗೆ ಯೋಗ್ಯವಲ್ಲದ ಶೌಚಾಲಯ. ಇದು ತಾಲ್ಲೂಕಿನ ಅಣಿಘಟ್ಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ.

ಅಣ್ಣಿಘಟ್ಟದಿಂದ ಕೂಗಳತೆ ದೂರದಲ್ಲಿ ಬಿದಲೂರು ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿ ಇದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಣಿಘಟ್ಟ ಗ್ರಾಮದವರು. ಸ್ವಲ್ಪ ದೂರದಲ್ಲಿರುವ ಬಿದಲೂರು ಗ್ರಾಮ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವಾಸ ಸ್ಥಳ. ಇಷ್ಟೆಲ್ಲಾ ಜನಪ್ರತಿನಿಧಿಗಳು ಇದ್ದರೂ ಶಾಲೆಯ ಈ ಸ್ಥಿತಿಗೆ ಪರಿಹಾರ ಇದುವರೆಗೂ ಸಿಕ್ಕಿಲ್ಲ ಎಂಬುದು ಸ್ಥಳೀಯ ಗ್ರಾಮದ ಪೋಷಕರ ಆರೋಪ.

ನಾಲ್ಕು ದಶಕ ಕಳೆದಿರುವ ಶಾಲಾ ಕಟ್ಟಡದ ಮೂರು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಇಟ್ಟಿಗೆ ಗೋಡೆಗೆ ಮಣ್ಣಿನ ಲೇಪನ ಮಾಡಲಾಗಿದೆ. ಕೊಠಡಿ ಮೇಲ್ಭಾಗದ ಸಿಮೆಂಟ್ ಹೊದಿಕೆ ಬಿರುಕು ಬಿಟ್ಟಿದೆ. ಸರ್ಕಾರಿ ಶಾಲೆಗಳೆಂದರೆ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ 150ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಖಾಸಗಿ ಶಾಲೆಗಳ ಆಕರ್ಷಣೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯಾಗಲಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಾಗಲಿ ಭೇಟಿ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಪರಿಹಾರಕ್ಕೆ ಪ್ರಯತ್ನ ಪಡೆಯದಿದ್ದರೆ ಸರ್ಕಾರಿ ಶಾಲೆಗಳಿಗೆ ಉಳಿಗಾಲ ಇಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಲಗುಮಯ್ಯ.

ತಾಲ್ಲೂಕಿನಲ್ಲಿ ಈಗಾಗಲೇ ಶಿಥಿಲಗೊಂಡಿರುವ 36 ಸರ್ಕಾರಿ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ನೀಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಶಾಲೆಗಳ ದುರಸ್ತಿಗೆ ₹450 ಕೋಟಿ ಬಿಡುಗಡೆ ಮಾಡಿದೆ. ದುರಸ್ತಿ ಮಾಡಬೇಕೋ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಬೇಕೋ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಶಾಸಕ ನಿಸರ್ಗ ನಾರಾಯನಸ್ವಾಮಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !