ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಅಲಯನ್ಸ್‌ ಟೆಕ್‌ ಸಮ್ಮೇಳನಕ್ಕೆ ಚಾಲನೆ

ವಿದ್ಯಾರ್ಥಿಗಳಿಂದ ಎಲೆಕ್ಟ್ರಿಕ್‌ ವಾಹನ ಆಧಾರಿತ ವಸ್ತು ಪ್ರದರ್ಶನ
Last Updated 27 ನವೆಂಬರ್ 2022, 4:19 IST
ಅಕ್ಷರ ಗಾತ್ರ

ಆನೇಕಲ್:ಪಟ್ಟಣ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಟೆಕ್‌ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ವಿವಿಧ ವಿಷಯ ತಜ್ಞರು ಪಾಲ್ಗೊಂಡು ವಿಚಾರ ಮಂಡಿಸಿದರು. ಸ್ಟಾರ್ಟ್‌ ಅಪ್‌ಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಲೆಕ್ಟ್ರಿಕ್‌ ವಾಹನ ಆಧಾರಿತ ವಸ್ತು ಪ್ರದರ್ಶನ ಏರ್ಪಡಿಸಿದ್ದರು.

ಟೆಕ್ನಾಲಜಿ ಸರ್ವೀಸಸ್‌ ಅಧ್ಯಕ್ಷ ಡಾ.ಅಜಯ್‌ ಪ್ರಭು ಮಾತನಾಡಿ, ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಹಾಗಾಗಿ, ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದುದರು.‌

ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಮಹತ್ವ ನೀಡಬೇಕು. ಉದ್ಯೋಗಕ್ಕೆ ಪೂರಕವಾದ ಅಂಶಗಳಿಗೆ ಆದ್ಯತೆ ನೀಡುವುದರಿಂದ ಅಭಿವೃದ್ಧಿ ಸಾಧ್ಯ. ಯುವ ಸಮುದಾಯ ಈ ದೇಶದ ಭವಿಷ್ಯವಾಗಿದ್ದಾರೆ. ಹಾಗಾಗಿ ಯುವಕರು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಹಲವು ಸವಾಲುಗಳಿವೆ. ಸಮರ್ಪಕವಾದ ಸಾಲ ಮತ್ತು ವಿಮಾ ಸೌಲಭ್ಯ ಕಲ್ಪಿಸುವುದರಿಂದ ಇ-ವಾಹನಗಳ ಉತ್ಪಾದನೆ ಮತ್ತು ಮಾರಾಟ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಾರ್ಟ್‌ ಅಪ್‌ ಕಂಪನಿಗಳು ಸಂಶೋಧನೆಗೆ ಮಹತ್ವ ನೀಡಬೇಕು. ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ಗೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಸ್ಟಾರ್ಟ್‌ ಅಪ್‌ಗಳು ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧವಾಗಬೇಕು ಎಂದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಬದಲಿಗೆ ಪರ್ಯಾಯ ಇಂಧನ ಬಳಸುವ ನಿಟ್ಟಿನಲ್ಲಿ ಇತ್ತೀಚಿನ ಸ್ಟಾರ್ಟ್‌ ಅಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಂಧನಕ್ಕಾಗಿ ಭಾರತವು ಬೇರೆ ದೇಶಗಳನ್ನು ಅವಲಂಬಿಸಿದೆ. ಹಾಗಾಗಿ, ವಿದ್ಯುತ್‌ ಆಧಾರಿತ ವಾಹನಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಬಂದಿದೆ ಎಂದು ಹೇಳಿದರು.

ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್‌ ಜಿ. ಛೆಬ್ಬಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಮತ್ತು ಇ–ವಾಹನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಟೆಕ್‌ ಸಮ್ಮೇಳನ ಏರ್ಪಡಿಸಲಾಗಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರ್ಯಾಯ ಇಂಧನ ಬಳಕೆಯ ವಸ್ತು ಪ್ರದರ್ಶನದಲ್ಲಿ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ವಿವಿಧ ಕ್ಷೇತ್ರದ ತಂತ್ರಜ್ಞರು ಸಮ್ಮೇಳನದಲ್ಲಿ ಪಾಲ್ಗೊಂಡಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಲಿದೆ ಎಂದರು.

ವೋಲ್ವೊ ಗ್ರೂಪ್‌ ಇಂಡಿಯಾ ಅಧ್ಯಕ್ಷ ಕಮಲ್‌ ಬಾಲಿ, ವಿಶ್ವವಿದ್ಯಾಲಯದ ಡಾ.ಅನುಭಾ ಸಿಂಗ್, ಸುರೇಖಾ ಶೆಟ್ಟಿ, ಡಾ.ಅಬ್ರಾಹಂ ಜಾರ್ಜ್, ಡಾ.ಶೈಲಾ ಮಹಾಪಾತ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT