ಗುರುವಾರ , ನವೆಂಬರ್ 14, 2019
18 °C

ಒಣಗಿದ ಮರ ತೆರವು ಕಾರ್ಯಾಚರಣೆ

Published:
Updated:

ವಿಜಯಪುರ: ಪಟ್ಟಣದ ಹಲವು ಕಡೆಗಳಲ್ಲಿ ಒಣಗಿದ್ದ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಮಾಡಿಸಿದ್ದರಿಂದ ಜನರು ನೆಮ್ಮದಿಯಿಂದ ಸಂಚಾರ ಮಾಡುವಂತಾಗಿದೆ.

ಇಲ್ಲಿನ ಹಳೇ ಕೆನರಾ ಬ್ಯಾಂಕ್ ರಸ್ತೆ, ಪದವಿ ಪೂರ್ವ ಕಾಲೇಜು ರಸ್ತೆ ರಸ್ತೆ ಸೇರಿದಂತೆ ರಸ್ತೆಗಳ ಇಕ್ಕೆಲುಗಳಲ್ಲಿ ಒಣಗಿ ಹೋಗಿದ್ದ ಮರಗಳಿಂದ ಕೊಂಬೆಗಳು ಮುರಿದು ಬೀಳುತ್ತಿದ್ದ ಪರಿಣಾಮವಾಗಿ ಜನರು ಆತಂಕದಲ್ಲೇ ಸಂಚಾರ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಹಲವಾರು ಬಾರಿ ಪುರಸಭೆ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಅಧಿಕಾರಿಗಳು ಇಂಥ ಮರಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಆನಂದ್ ಮಾತನಾಡಿ, ಒಣಗಿರುವ ಮರಗಳ ತೆರವಿಗಾಗಿ ಪುರಸಭೆಯವರು ಹಣ ಪಾವತಿ ಮಾಡಿದ್ದರು. ಮರಗಳು ತೆರವು ಮಾಡಬೇಕಾದರೆ ಅನುಮತಿ ಬೇಕಾಗುತ್ತದೆ. ಆದ್ದರಿಂದ ತಡವಾಗಿತ್ತು. ಒಣಗಿರುವ ಮರಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದರು.

ಪ್ರತಿಕ್ರಿಯಿಸಿ (+)