ಸೋಮವಾರ, ಜೂನ್ 21, 2021
20 °C
ಪರಿಸರ ಸ್ನೇಹಿ ಅರಿಶಿನ ಗಣೇಶಮೂರ್ತಿ ತಯಾರಿಕೆ ಆನ್‌ಲೈನ್‌ ತರಬೇತಿ

ಮನೆಯಲ್ಲೇ ಗಣೇಶ ತಯಾರಿಸಿ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೊರೊನಾ ‌ ಸೋಂಕು ಹರಡುತ್ತಿರುವ ಈ ಸಂದರ್ಭ ದಲ್ಲಿ ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸಿಕೊಂಡು ಹಬ್ಬ ಆಚರಿಸುವ ಕುರಿತಂತೆ ಭಾನುವಾರ ಸುಚೇತನ ಎಜುಕೇಷನ್‌ ಆಂಡ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಆನ್‌ಲೈನ್‌ ತರಬೇತಿ ಕಾರ್ಯಾಗಾರ ನಡೆಯಿತು.

ಗಣೇಶಮೂರ್ತಿ ತಯಾರಿಕೆ ಕಾರ್ಯಾಗಾರ ಕುರಿತು ಮಾಹಿತಿ ನೀಡಿದ ಸುಚೇತನ ಎಜುಕೇಷನ್‌ ಆಂಡ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸುನಿಲ್‌, ಟ್ರಸ್ಟಿ ಮಂಜುನಾಥ್‌ನಾಗ್‌, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈ ಬಾರಿ ಕೊರೊನಾ ಸೋಂಕು ನಿರೋಧಕ ಔಷಧಿ ಗುಣ ಇರುವಂತಹ ಹಾಗೂ ಪರಿಸರ ಸ್ನೇಹಿ ಅರಿಶಿನದ ಪುಡಿ ಮತ್ತು ಮೈದಾಹಿಟ್ಟು ಮಿಶ್ರಣದ ಮೂರ್ತಿಗಳ ತಯಾರಿಕೆ ಹೆಚ್ಚು ಜನಪ್ರಿಯಗೊಳಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿಯೇ 2019ರಲ್ಲಿ ಮಣ್ಣಿನ ಗಣೇಶನಮೂರ್ತಿಗಳನ್ನು ಸ್ವತಃ ತಾವೇ ಸಿದ್ಧಗೊಳಿಸಿಕೊಳ್ಳುವ ಬಗ್ಗೆ ತರಬೇತಿ ನೀಡಲಾಗಿತ್ತು. ಈ ಬಾರಿ ಎಲ್ಲರನ್ನು ಒಂದು ಕಡೆ ಸೇರಿಸಲು ಸಾಧ್ಯವಾಗದ ಕಾರಣ ಆನ್‌ಲೈನ್‌ ಮೂಲಕ ಕಾರ್ಯಾಗಾರ ನಡೆಸಲಾಯಿತು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಎಚ್‌.ಕೆ.ಲೋಕೇಶ್‌ ಮಾತನಾಡಿ, ‘ಬಣ್ಣದ ಗಣೇಶ, ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ‌ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡಿವೆ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಅಧ್ಯಯನ ನಡೆಸಿದ ನಂತರ ಇಂತಹ ಮೂರ್ತಿಗಳ ತಯಾರಿಕೆ ತಡೆಗೆ ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ, ಜನರ ಧಾರ್ಮಿಕ ಭಾವನೆ ಗೌರವಿಸುವ ಮತ್ತು ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲು ಅರಿಶಿನದ ಗಣೇಶಮೂರ್ತಿಗಳ ತಯಾರಿಕೆ ಕುರಿತಂತೆ ಪ್ರಚಾರ ಕೂಗೊಳ್ಳಲಾಗುತ್ತಿದೆ’ ಎಂದರು.

ಕಾರ್ಯಾಗಾರದಲ್ಲಿ ಸುಚೇತನ ಎಜುಕೇಷನ್‌ ಆಂಡ್‌ ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾ ರಿಗಳಾದ ಪ್ರದೀಪ್‌, ಪ್ರವೀಣ್‌, ಶ್ರೀನಿವಾಸ್‌, ಶ್ರೀನಿಧಿ, ಪಿ.ಎಸ್‌.ಲೋಕೇಶ್‌, ಭರತ್‌, ಅನಿಲ್‌ ಜಿ.ರಾಜಶೇಖರ್‌, ಕಾರ್ಯಾಗಾರಕ್ಕೆ ‘ಪ್ರಜಾವಾಣಿ’ ಮಾಧ್ಯಮ ಸಹಭಾಗಿತ್ವ ವಹಿಸಿತ್ತು. ಗಣೇಶಮೂರ್ತಿಗಳ ತಯಾರಿಕೆ ಕುರಿತು ತರಬೇತುದಾರ ಆನಂದ್‌ ತಿಳಿಸಿಕೊಟ್ಟರು. ಕಾರ್ಯಾ ಗಾರದ ತಂತ್ರಜ್ಞಾನ ಸಹಯೋಗವನ್ನು ಶ್ರೀವಿಜ್ ಹಾಗೂ ಎಸ್.ಟೆಕ್ ಸಾಫ್ ಆಸ್ಟ್ರೇಲಿಯಾ ಮೂಲದ ಕಂಪನಿಗಳು  ವಹಿಸಿದ್ದವು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.