ಭಾನುವಾರ, ಮಾರ್ಚ್ 29, 2020
19 °C

ದಂಡಾಧಿಕಾರಿಗಳ ದಂಡಯಾತ್ರೆ: ಸ್ಥಳೀಯರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ತಾಲ್ಲೂಕಿನಲ್ಲಿ 2019ರ ಜನವರಿಯಿಂದ ಈವರೆಗೆ 11 ತಹಶೀಲ್ದಾರ್‌ಗಳ ವರ್ಗಾವಣೆಯಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನ. 13‌ರಂದು ಬಿ.ಆರ್.ಮಂಜುನಾಥ್ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೇವಲ 13 ದಿನ ಕರ್ತವ್ಯ ನಿರ್ವಸಿದ್ದರೂ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನ. 25ರಂದು ಆದೇಶ ಹೊರಡಿಸಿ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗ ಹಿಂದಿರುಗುವಂತೆ ಸೂಚಿಸಿದೆ.

ಪ್ರಸ್ತುತ ಗ್ರೇಡ್ –2 ತಹಶೀಲ್ದಾರ್ ಅನಿಲ್ ಕುಮಾರ್ ಅವರನ್ನು ಪ್ರಭಾರಿ ತಹಶೀಲ್ದಾರ್‌ ಆಗಿ ನೇಮಕ ಮಾಡಿದ್ದು, ಇನ್ನೆಷ್ಟು ದಿನ ದಂಡಾಧಿಕಾರಿಗಳ ದಂಡೆಯಾತ್ರೆ ಎಂಬುದು ಒಂದೆಡೆಯಾದರೆ ಇವರನ್ನು ಬಿಟ್ಟು ಮತ್ತ್ಯಾರು ಎಂಬುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಒಂದು ವರ್ಷದಿಂದ ತಾಲ್ಲೂಕು ಕಚೇರಿಯಲ್ಲಿ ರೈತರ ವಿವಿಧ ಭೂ ದಾಖಲಾತಿ ಕಡತಗಳು ವಿಲೇವಾರಿಯಾಗಿಲ್ಲ. ಗಣಕೀಕೃತ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಬೇಜವಾಬ್ದಾರಿಯಿಂದ ಹಾಲಿ ಸ್ವತ್ತಿನ ಮಾಲೀಕರ ಹೆಸರು, ಯಾವುದೇ ಗ್ರಾಮದಲ್ಲಿನ ಸತ್ತವರ ಹೆಸರು ಪಹಣಿಯಲ್ಲಿ ನಮೂದು ಆಗಿರುತ್ತದೆ. ತಿದ್ದುಪಡಿಗಾಗಿ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಹಿರಿಯ ವ್ಯವಸ್ಥಾಪಕರ ಬಳಿ ಕಡತ ವಿಲೇವಾರಿ ಮಾಡಬೇಕು. ಅಂತಿಮವಾಗಿ ತಹಶೀಲ್ದಾರ್ ಲಾಗಿನ್ ಪಡೆದು ಹೆಬ್ಬೆಟ್ಟು ನೀಡಬೇಕು. ಹಲವು ಕಡತಗಳಿಗೆ ತಹಶೀಲ್ದಾರ್ ಹೆಬ್ಬೆಟ್ಟು ಕಡ್ಡಾಯ ಮಾಡಲಾಗಿದೆ. ಎಂಟು ತಿಂಗಳಿಂದ ಅಲೆಯುತ್ತಿದ್ದೇನೆ ನಯಾ ಪೈಸೆಯ ಕೆಲಸ ಆಗಿಲ್ಲ. ಬರಿ ಅಲೆದಾಟವಾಗಿದೆ ಎಂದು ದೊಡ್ಡ ಸಾಗರಹಳ್ಳಿ ಮುನಿಯಪ್ಪ ಅಳಲು ತೋಡಿಕೊಂಡರು.

ತಹಶೀಲ್ದಾರ್ ವರ್ಗಾವಣೆಗೊಂಡ ನಂತರ ಲಾಗಿನ್ ಜವಾಬ್ದಾರಿ ಜಿಲ್ಲಾಧಿಕಾರಿಗೆ ಇರುತ್ತದೆ. ಹೊಸದಾಗಿ ಬರುವ ತಹಶೀಲ್ದಾರ್‌ಗೆ ಕನಿಷ್ಠ ಹತ್ತಾರು ದಿನದವಾದರೂ ಲಾಗಿನ್ ಸಿಗುವುದಿಲ್ಲ. ನಂತರ ತಹಶೀಲ್ದಾರ್ ವರ್ಗಾವಣೆ ಮತ್ತೆ ಅದೇ ಪರಿಸ್ಥಿತಿಯಾದರೆ ತಾಲ್ಲೂಕು ಆಡಳಿತದಲ್ಲಿ ಏನು ನಡೆಯುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ನಾಲ್ಕು ತಹಶೀಲ್ದಾರ್ ವರ್ಗಾವಣೆ ಎಂದರೆ ಸ್ಥಳೀಯರ ಪರಿಸ್ಥಿತಿ ಹೇಗೆ. ಇದಕ್ಕೆಲ್ಲ ಯಾರು ಜವಾಬ್ದಾರರು. ಜಿಲ್ಲೆಯಲ್ಲಿ ಎಲ್ಲ ಮಾದರಿಯ ಚುನಾವಣಾ ನೀತಿ ಸಂಹಿತೆ ಇದೆ. ಆದರೆ ವರ್ಗಾವಣೆಗೆ ಇಲ್ಲವೆ. ಚುನಾವಣಾಧಿಕಾರಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್.ಟಿ.ಐ. ಕಾರ್ಯಕರ್ತ ಎಂ.ಆಂಜಿನಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು