ಸೋಮವಾರ, ಡಿಸೆಂಬರ್ 9, 2019
20 °C

ಎಂಟಿಬಿಗೆ ಸೋಲಿನ ಭಯ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ‘ಮಹಿಳೆಯಿಂದ ಸಾಧನೆ ಶೂನ್ಯ ಎಂದು ಕೆಲವರು ಟೀಕಿಸುತ್ತಿದ್ದಾರೆ. ಮಹಿಳೆಯರ ಶಕ್ತಿ ಏನೆಂಬುದು   ಡಿ.5ರಂದು ನಡೆಯುವ ಮತದಾನದಲ್ಲಿ ಕ್ಷೇತ್ರದ ಜನ ನಿರ್ಧರಿಸಲಿದ್ದಾರೆ’ ಎಂದು ಎಂಟಿಬಿ ನಾಗರಾಜ್ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಸತ್ಯವಾರ, ಡಿ.ಶೆಟ್ಟಿಹಳ್ಳಿ, ಮಲಿಯಪ್ಪನಹಳ್ಳಿ, ಮಕರಪನಹಳ್ಳಿ ಸೇರಿದಂತೆ ನಂದಗುಡಿ ಹೋಬಳಿಯಲ್ಲಿ ಪ್ರಚಾರ  ಕೈಗೊಂಡು ಅವರು ಮಾತನಾಡಿದರು.

ಎಂಟಿಬಿ ನಾಗರಾಜ್ ಸಹೋದರ ಪಿಳ್ಳಣ್ಣ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ಉಪ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ. ಹತಾಶರಾಗಿ ಅವರು ಮಾತನಾಡುತ್ತಿದ್ದಾರೆ. ನಮ್ಮನ್ನು ಇರುವೆ, ಅವರನ್ನು ಹುಲಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ, ಇರುವೆಗೆ ಆನೆ ಭಯ ಪಡುತ್ತದೆ. ಇರುವೆ ಕೇವಲ ಎಂದುಕೊಳ್ಳುವುದು’ ದಡ್ಡತನ ಎಂದು ಕುಟುಕಿದರು.

ಕ್ಷೇತ್ರದ ಜನರು ಮೂಲ ಸಲ ಗೆಲುವು ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕರೂ ಜನರ ಅಭಿಪ್ರಾಯ ತಿರಸ್ಕರಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ಬೀರಪ್ಪ, ಚೀಮಸಂದ್ರ ಶಂಕರನಾರಾಯಣ, ಕೆಂಚೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಇದ್ದರು.

ಪ್ರತಿಕ್ರಿಯಿಸಿ (+)