ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಸೌಲಭ್ಯಗಳಿಗೆ ಎಫ್‌ಐಡಿ ಕಡ್ಡಾಯ: ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ

Published : 9 ನವೆಂಬರ್ 2023, 14:22 IST
Last Updated : 9 ನವೆಂಬರ್ 2023, 14:22 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆಯಡಿ ಖರೀದಿ, ಬೆಳೆ ವಿಮೆ ಯೋಜನೆ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನೆ ಇಲಾಖೆಯ ವಿವಿಧ ಸವಲತ್ತು ಪಡೆಯಲು ಮತ್ತು ಇತರೆ ಯೋಜನೆಗಳನ್ನು ಪಡೆಯಲು ರೈತರ ಗುರುತಿನ ಸಂಖ್ಯೆ ಫ್ರೂಟ್ಸ್(ಎಫ್‌ಐಡಿ) ಕಡ್ಡಾಯ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ ತಿಳಿಸಿದರು.

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿ ಲಭ್ಯವಿದ್ದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ತಾಲ್ಲೂಕಿನಲ್ಲಿ 1,30,987 ಸಾಗುವಳಿಯ ಸರ್ವೆ ನಂಬರ್‌ಗಳಿದ್ದು, ಇವುಗಳ ಪೈಕಿ 75,395 ಸರ್ವೆ ನಂಬರ್‌ ಮಾತ್ರ ಫ್ರೂಟ್ಸ್ ತಂತ್ರಾಂಶದೊಂದಿಗೆ ಸೇರ್ಪಡೆಗೊಂಡಿದೆ. ಉಳಿಕೆ 55,592 ತಾಕುಗಳ ಸರ್ವೆ ನಂಬರ್‌ ಹೊಂದಿರುವ ರೈತರು ಎಫ್‌ಐಡಿಗಳಿಗೆ ಜೋಡಣೆ ಮಾಡಿಕೊಳ್ಳಬೇಕು ಎಂದು ಕೋರಿದ್ದಾರೆ.

ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಭೂ ರಹಿತ ರೈತರಿಗೆ ಮಂಜೂರಾಗಿದ್ದ, ಇನ್ನೂ ಪೋಡಿಯಾಗದಿರುವ ಜಮೀನುಗಳ ಸರ್ವೆ ನಂಬರ್‌ಗಳನ್ನು ಕಂದಾಯ ಇಲಾಖೆ ಎರಡು ವರ್ಷಗಳ ಹಿಂದೆ ಒಟ್ಟುಗೂಡಿಸಿತ್ತು. ಹೀಗಾಗಿ ಹಿಸ್ಸಾ ನಂಬರ್‌ಗಳನ್ನು ಹೊಂದಿದ್ದ ಸಾಕಷ್ಟು ರೈತರ ಸರ್ವೆ ನಂಬರ್‌ಗಳು ಎಫ್‌ಐಡಿ ತಂತ್ರಾಂಶದಿಂದ ಕೆಲವು ಕೈಬಿಟ್ಟು ಹೋಗಿವೆ. ಇದರಿಂದಾಗಿ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಹೊಸದಾಗಿ ಭೂಮಿ ಖರೀದಿಸುವ ರೈತರು ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಜರಾಕ್ಸ್‌ ಪ್ರತಿ ಸೇರಿದಂತೆ ಅಗತ್ಯ ದಾಖಲೆ ನೀಡಿ ಎಫ್‌ಐಡಿ ಪಡೆಯಬೇಕು. ಕೃಷಿ ಇಲಾಖೆ, ನಾಡಕಚೇರಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಗೆ ಭೇಟಿ ನೀಡಿ ಎಫ್‌ಐಡಿಯಲ್ಲಿ ತಮ್ಮ ಜಮೀನುಗಳ ಸರ್ವೆ ನಂಬರ್‌ ಸೇರ್ಪಡೆಯಾಗಿದೆಯೇ, ಇಲ್ಲವೆ ಎಂದು ರೈತರು ಒಮ್ಮೆ ಪರಿಶೀಲಿಸಿಕೊಂಡರೆ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಸಮಯದಲ್ಲಿ ಪರದಾಡುವುದು ತಪ್ಪಲಿದೆ. ಬರ ಪರಿಹಾರದಡಿಯಲ್ಲಿ ಬೆಳೆ ನಷ್ಟ ಪರಿಹಾರ ಪಡೆಯಲು ಸಹಕಾರಿಯಾಗಲಿದೆ ಎಂದರು.

ಅಂಕಿ ಅಂಶ

  • 1,30,987- ಒಟ್ಟು ಸಾಗುವಳಿ ಸರ್ವೆ ನಂಬರ್‌

  • 75,395- ಎಫ್‌ಐಡಿಗೆ ಸೇರ್ಪಡೆಯಾಗಿರುವ ಸರ್ವೆ ನಂಬರ್‌ 

  • 55,592- ಜೋಡಣೆ ಆಗಬೇಕಿರುವ ಸರ್ವೆ ನಂಬರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT