ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಮೀಸಲಾತಿಗೆ ಧಕ್ಕೆ ಸಲ್ಲದು: ಆರ್‌. ಅಶೋಕ್‌

ಒಕ್ಕಲಿಗರಿಗೆ ಮೀಸಲಾತಿಗೆ ಹೋರಾಟ: ಸ್ವಾಮೀಜಿ ಭೇಟಿ
Last Updated 21 ಫೆಬ್ರುವರಿ 2021, 21:11 IST
ಅಕ್ಷರ ಗಾತ್ರ

ಜಿ.ಹೊಸಹಳ್ಳಿ (ದೊಡ್ಡಬಳ್ಳಾಪುರ):ಒಕ್ಕಲಿಗ ಸಮುದಾಯದ ಮೀಸಲಾತಿಗಾಗಿ ಹೋರಾಟ ರೂಪುರೇಷೆ ಕುರಿತು ಚರ್ಚಿಸಲು ಆದಿಚುಂಚನಗಿರಿ ಮಠದ ನಿರ್ಮಾಲಾನಂದಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿಸೋಮವಾರ ಸಭೆ ನಡೆಯಲಿದೆ. ನಾಳೆ ಸ್ವಾಮೀಜಿಯನ್ನು ಭೇಟಿ ಮಾಡಿ ಅಲ್ಲಿಯೇ ಮನವಿ ಸ್ವೀಕರಿಸಿ, ಚರ್ಚಿಸಲಾಗುವುದು ಎಂದುಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ಭಾನುವಾರಗ್ರಾಮ ವಾಸ್ತವ್ಯ ಮುಗಿಸಿಕೊಂಡು ಹೊರಡುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಮೀಸಲಾತಿಗಾಗಿ ಯಾವುದೇ ಸಮುದಾಯದ ಸ್ವಾಮೀಜಿ ಗಡುವು ನೀಡದಂತೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಿಜವಾದ ಬಡವರಿಗೆ ಮೀಸಲಾತಿ ಸಿಗಬೇಕು ಎನ್ನುವುದು ಸಂವಿಧಾನದ ಆಶಯ. ತುಳಿತಕ್ಕೆ ಒಳಗಾದ ಸಮುದಾಯದವರ ಮೀಸಲಾತಿ ಕಿತ್ತು ಮತ್ತೊಂದು ಸಮುದಾಯಕ್ಕೆ ಕೊಡುವುದು ಒಳ್ಳೆಯದಲ್ಲ’ ಎಂದರು.

’ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಅಯೋಗದ ವರದಿಗ 30 ವರ್ಷಗಳಿಂದ ಹಾಗೆಯೇ ಇವೆ. ಅಯೋಗಕ್ಕೆ ಸಮೀಕ್ಷೆ ನಡೆಸುವ ಅಧಿಕಾರಿ ಇದೆ. ಅಯೋಗ ನೀಡುವ ವರದಿಯರೆಗೂ ಕಾಯಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮರ್ಥರಿದ್ದಾರೆ. ಮೀಸಲಾತಿ ಸಮಸ್ಯೆ ಸೂಕ್ತ ರೀತಿಯಲ್ಲಿ ಪರಿಹರಿಸಲಿದ್ದಾರೆ’ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಪ್ರಾದೇಶಿಕ ಆಯುಕ್ತ ನವೀನ್‌ರಾಜ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT