ರಸ್ತೆ ಗುಂಡಿ ಮುಚ್ಚಲು ಮನವಿ

ಗುರುವಾರ , ಜೂನ್ 20, 2019
26 °C

ರಸ್ತೆ ಗುಂಡಿ ಮುಚ್ಚಲು ಮನವಿ

Published:
Updated:
Prajavani

ದೇವನಹಳ್ಳಿ: ಬೆಂಗಳೂರು ನಗರದ ನಾಗವಾರ ಹೆಬ್ಬಾಳ ಕೆರೆಯ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ಅಳವಡಿಸಿರುವ ರಸ್ತೆ ಮದ್ಯದ ಪೈಪ್‌ಲೈನ್‌ ಜಾಗ ಗುಂಡಿಗಳಾಗಿ ಮಾರ್ಪಟ್ಟಿದೆ. 

ತರಾತುರಿಯಲ್ಲಿ ನಡೆದ ಪೈಪ್‌ಲೈನ್‌ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಮಾತ್ರವಲ್ಲ ಪ್ಲಸ್‌ ಆಕಾರದಲ್ಲಿ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ರಸ್ತೆಯ ಸಿಗ್ನಲ್‌ ವೃತ್ತದಲ್ಲಿ ರಾತ್ರಿ ವೇಳೆ ಸೋಲಾರ್‌ ದೀಪಗಳ ಬೆಳಕು ಇರುವುದಿಲ್ಲ. ಅನೇಕ ಅಪಘಾತಗಳು ಸಂಭವಿಸುತ್ತಿವೆ. ಅನೇಕರು ಸಿಗ್ನಲ್‌ ಜಂಪ್‌ ಮಾಡುತ್ತಾರೆ. ಸಂಚಾರಿ ಪೊಲೀಸರು ವೃತ್ತದಲ್ಲಿ ಇರುವುದೇ ಅಪರೂಪ. ನಗರದಲ್ಲಿರುವ ಎರಡು ಸಿಗ್ನಲ್‌ ವೃತ್ತದ ಪೈಕಿ ಇದೂ ಒಂದು. ಮತ್ತೊಂದು ಹೊಸ ಬಸ್‌ ನಿಲ್ದಾಣದಲ್ಲಿದ್ದು ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಿಸಿದ ಇಲಾಖೆ ಸಿಗ್ನಲ್‌ ಬಳಿಯ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಸ್ಥಳೀಯ ನಿವಾಸಿ ಮುನಿರಾಜ್ ಆಗ್ರಹಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !