ಮಂಗಳವಾರ, ನವೆಂಬರ್ 19, 2019
26 °C

ದೇವನಹಳ್ಳಿ: ಸ್ಟೇಷನರಿ ಮಳಿಗೆಗೆ ಬೆಂಕಿ, ಅಪಾರ ನಷ್ಟ

Published:
Updated:

ದೇವನಹಳ್ಳಿ: ನಗರದ ಹಳೆಬಸ್‌ ನಿಲ್ದಾಣದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಪ್ರಮುಖ ರಸ್ತೆಯಲ್ಲಿರುವ ಸ್ಟೇಷನರಿ ಮಳಿಗೆಗೆ ಸಂಜೆ ಬೆಂಕಿ ಬಿದ್ದ ಪರಿಣಾಮ ಅಪಾರ ನಷ್ಟವಾಗಿದೆ.

ಮಳಿಗೆ ಮಾಲೀಕ ವಿಜಯಕುಮಾರ್‌ ಎಂಬುವವರಿಗೆ ಸೇರಿ ದುರ್ಗಾಸ್ಟೋರ್‌ ಮಳಿಗೆ ಮೇಲಿನ ಸ್ಟೇಷನರಿ ದಾಸ್ತಾನು ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ. ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಶೀಲನೆಯ ನಂತರ ಬೆಂಕಿಗೆ ಕಾರಣ ಮತ್ತು ಎಷ್ಟು ನಷ್ಠವಾಗಿದೆ ಎಂದು ಅಂದಾಜಿಸಬಹುದು. ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಂದಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)