ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಮಹೋತ್ಸವಕ್ಕೆ ಧ್ವಜಾರೋಹಣ

Last Updated 13 ಮೇ 2019, 13:46 IST
ಅಕ್ಷರ ಗಾತ್ರ

ಕನಕಪುರ: ನಗರದ ಸಂಗಮ ರಸ್ತೆಯಲ್ಲಿರುವ ಶ್ರೀ ಧರ್ಮರಾಯ ಮತ್ತು ಶ್ರೀ ದ್ರೌಪತಮ್ಮ ದೇವಿಯ 22ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು.

ಕರಗ ಮಹೋತ್ಸವದ ಶಕ್ತ್ಯೋತ್ಸವದ ಧ್ವಜಾರೋಹಣ ನೆರವೇರಿಸುವುದಕ್ಕೂ ಮುನ್ನ ದೇವಾಲಯದಲ್ಲಿ ಹೋಮ ಹವನವನ್ನು ದೇವಾಲಯದಲ್ಲಿ ನೆರವೇರಿಸಿದರು.

ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ಸೇರಿದಂತೆ ಭೀಮ, ಅರ್ಜುನ, ನಕುಲ, ಸಹದೇವ ದೇವರ ಉತ್ಸವ ಮೂರ್ತಿಗಳನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು.

ಕೆ.ಆರ್‌. ವೆಂಕಟರಮಣಸ್ವಾಮಿ ಮತ್ತು ಕುಟುಂಬ, ಕೆ.ಜಿ.ದೇವರಾಜು ಮತ್ತು ಕುಟುಂಬ, ಟಿ.ರಾಮಚಂದ್ರ ಮತ್ತು ಕುಟುಂಬ, ವೆಂಕಟೇಶ್‌ ಮತ್ತು ಕುಟುಂಬದವರು ಪೂಜಾ ಕಾರ್ಯ ನೆರವೇರಿಸಿಕೊಟ್ಟರು.

ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ಕೆ.ಪಿ. ಪೆರುಮಾಳಯ್ಯ, ಟೌನ್‌ ಅಧ್ಯಕ್ಷ ಕೆ.ಪಿ. ಆನಂದಯ್ಯ, ಉಪಾಧ್ಯಕ್ಷರಾದ ವೆಂಕಟರಮಣಸ್ವಾಮಿ, ಡಿ.ವೆಂಕಟರಮಣಸ್ವಾಮಿ, ಶ್ರೀನಿವಾಸ, ಕಾರ್ಯದರ್ಶಿಗಳಾದ ಟ.ರಾಮಚಂದ್ರ, ಶಾಂತ, ಜಯರಾಮು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT