ದೇವನಹಳ್ಳಿ: ರಾಯಪುರದಿಂದ ಮಂಗಳೂರಿಗೆ ಬರುತ್ತಿದ್ದ ಅಪೆಕ್ಸ್ ವಿಸ್ಟಾ ಏರ್ಲೈನ್ಸ್ನ ಏರ್ಬಸ್–321 ವಿಮಾನವನ್ನು ಗುರುವಾರ ಅಪಹರಿಸಿದ ಅಪಹರಣಕಾರರು ವಿಮಾನವನ್ನು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಸಿದರು!

ಹೈಜಾಕ್ ಆಗಿದ್ದ ವಿಮಾನದಲ್ಲಿದ್ದ 30 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಯನ್ನು ಸುರಕ್ಷಿತ ಬಿಡುಗಡೆ ಮಾಡಲು ಅಪಹರಣಕಾರರು ವಿವಿಧ ಬೇಡಿಕೆ ಮುಂದಿಟ್ಟರು. ಅಪಹರಣಕಾರರು ಒಬ್ಬ ಪ್ರಯಾಣಿಕನನ್ನು ಕೊಂದರು.

ತುರ್ತು ಪ್ರತಿಕ್ರಿಯೆ ಕ್ರಮವಾಗಿ ವಿಮಾನ ನಿಲ್ದಾಣದ ಎರಡೂ ರನ್ವೇಗಳನ್ನು ಕೆಲಕಾಲ ವಿಮಾನ ಸಂಚಾರಕ್ಕೆ ಮುಚ್ಚಲಾಗಿತ್ತು. ಅಪಹರಣಕಾರರೊಂದಿಗೆ ಮಾತುಕತೆ ನಡೆಸಲು ಸಂಧಾನಕಾರರನ್ನು ನಿಯೋಜಿಸಲಾಗಿದ್ದು, ಬಳಿಕ ಅವರು ಪ್ರಯಾಣಿಕರನ್ನು ಬಿಡುಗಡೆಗೆ ಮನವೊಲಿಸಿದರು. ಇನ್ನುಳಿದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಭದ್ರತಾ ಪಡೆಗಳು ಸುರಕ್ಷಿತವಾಗಿ ರಕ್ಷಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಹೈಜಾಕ್ ಅಣುಕು ಪ್ರದರ್ಶನದ ಈ ದೃಶ್ಯಗಳು ವಿಮಾನ ಅಪಹರಣದ ನೈಜ ದೃಶ್ಯಗಳನ್ನು ನೆನಪಿಸಿದವು.

ಇದೊಂದು ಅಣುಕು ಕಾರ್ಯಾಚರಣೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಬಳಕೆದಾರರ ಸುರಕ್ಷತೆ ಖಚಿತಪಡಿಸುವ ಉದ್ದೇಶದಿಂದ ಈ ಅಣುಕು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಅಣುಕು ಕಾರ್ಯಾಚರಣೆ ಬಳಿಕ ಸಂಪೂರ್ಣ ಮೌಲ್ಯಮಾಪನ ನಡೆಸಿ, ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಸಂವಹನ ವ್ಯವಸ್ಥೆ ಹಾಗೂ ವಿವಿಧ ಸಂಸ್ಥೆಗಳ ಸಮನ್ವಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.