ಚನ್ನಪಟ್ಟಣ: ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಅವಶ್ಯಕವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಹೇಳಿದರು.

ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ರುದ್ರಯ್ಯ ಸ್ಮಾರಕ ಭವನದಲ್ಲಿ ಚಿಕ್ಕೇನಹಳ್ಳಿಯ ಸಂಜೀವ್ ಸಿದ್ದಾರ್ಥ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಸಂಜೀವ್ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಸಮುದಾಯ ಟಿವಿ ಮತ್ತು ಮೊಬೈಲ್ನಲ್ಲಿ ಮುಳಗಿರುವುದರಿಂದ ಜಾನಪದ ಕಲೆಗಳಿಗೆ ಮಾನ್ಯತೆ ಕಡಿಮೆಯಾಗುತ್ತಿದೆ. ಆದ್ದರಿಂದ ಜಾನಪದ ಉಳಿಸುವ ಬೆಳೆಸುವ ಕಾರ್ಯದಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಸಾಹಿತಿ ಬೋರಲಿಂಗಯ್ಯ, ಸಾಂಸ್ಕೃತಿಕ ವಲಯದಲ್ಲಿ ಎಲೆಮರೆಕಾಯಿಯಂತೆ ಇರುವ ಯುವ ಕಲಾವಿದರಿಗೆ ಪ್ರಾದೇಶಿಕವಾರು ಕಲೆಗಳಾದ ಡೊಳ್ಳು, ತಮಟೆ, ವೀರಗಾಸೆ, ಪಟದ ಕುಣಿತ, ಸೋಬಾನೆ ಮುಂತಾದ ಕಲೆಗಳ ಬಗ್ಗೆ ಹಿರಿಯ ಕಲಾವಿದರಿಂದ ತರಬೇತಿ ನೀಡುವ ಮೂಲಕ ಜಾನಪದದ ಸಮೃದ್ಧಿಯನ್ನು ಗಟ್ಟಿಗೊಳಿಸಬೇಕು ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ, ಟ್ರಸ್ಟ್ ಕಾರ್ಯದರ್ಶಿ ಎಸ್. ಕುಮಾರ್, ಟ್ರಸ್ಟ್ ಅಧ್ಯಕ್ಷ ಶಿವರಾಮ ಚಿಕ್ಕೇನಹಳ್ಳಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಕ್ಕೂರು ರಮೇಶ್, ಜೈಪ್ರಕಾಶ್, ರಂಗಭೂಮಿ ಕಲಾವಿದ ಶೆಟ್ಟಿಹಳ್ಳಿ ಶಿವಪ್ಪ, ರೈತ ಮುಖಂಡ ವಿ.ಎಸ್. ಸುಜೀವನ್ ಕುಮಾರ್, ಉದ್ಯಮಿ ನಯಾಜ್ ಪಾಷಾ, ಹಿರಿಯ ಸೋಬಾನೆ ಕಲಾವಿದೆ ಲಕ್ಷ್ಮಮ್ಮ, ಕೆ ರಾಜೇಶ್, ಶ್ರೀನಿವಾಸಮೂರ್ತಿ, ಗಾಯಕರಾದ ಜಯಸಿಂಹ, ಚಕ್ಕೆರೆ ಲೋಕೇಶ್ ಭಾಗವಹಿಸಿದ್ದರು.

ತಮಟೆ ವಾದನ, ಪೂಜಾ ಕುಣಿತ, ಕಂಸಾಳೆ ನೃತ್ಯ, ಪಟದ ಕುಣಿತ, ಕೀಲು ಕುದುರೆ, ಹುಲಿವೇಷ, ಸೋಮನ ಕುಣಿತ, ಸೋಬಾನೆ ಪದ, ಜಾನಪದ ಗೀತೆ, ಇತರೆ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.