ಘಾಟಿ ದೇವಾಲಯ ಹುಂಡಿಯಲ್ಲಿ ವಿದೇಶಿ ನೋಟು

7

ಘಾಟಿ ದೇವಾಲಯ ಹುಂಡಿಯಲ್ಲಿ ವಿದೇಶಿ ನೋಟು

Published:
Updated:
Deccan Herald

ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ ಈ ಬಾರಿಯೂ ವಿದೇಶಿ ನೋಟುಗಳು ದೊರೆತಿವೆ. ಮೇ ತಿಂಗಳಲ್ಲಿ ನಡೆದ ಎಣಿಕೆಯಲ್ಲಿಯೂ  ವಿದೇಶಿ ನೋಟುಗಳು ಸಿಕ್ಕಿದ್ದವು.

ಈ ಬಾರಿ ಹುಂಡಿಯಲ್ಲಿ ₹29,98,243 ಸಂಗ್ರಹ ಆಗಿದೆ. ಇದರೊಂದಿಗೆ 1ಗ್ರಾಂ ಚಿನ್ನ, 1.6 ಕೆ.ಜಿ ಬೆಳ್ಳಿ ಸಿಕ್ಕಿದೆ. ಈ ಬಾರಿ ಸಿಕ್ಕಿರುವ ವಿದೇಶಿ ನೋಟುಗಳಲ್ಲಿ ಒಮನ್ ದೇಶದ 38 ನೋಟುಗಳು, ಅಮೆರಿಕದ 20 ಡಾಲರ್‌ನ 1 ನೋಟು, 1 ಡಾಲರ್‌ನ 2 ನೋಟು, ನೇಪಾಳದ 10 ರೂಪಾಯಿ 1ನೋಟು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

ಪ್ರತಿ ತಿಂಗಳಿನಂತೆ ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಯಿತು. ಮುಜರಾಯಿ ತಹಶೀಲ್ದಾರ್ ಕೆ.ಪದ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜಲಧಿ ರಂಗಣ್ಣ, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ.ಎಂ.ಚನ್ನಪ್ಪ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.

ಅಧೀಕ್ಷಕ ಎಂ.ನಾರಾಯಣಸ್ವಾಮಿ, ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಜಗನ್ನಾಥಾಚಾರ್, ಓಬದೇನಹಳ್ಳಿ ಮುನಿಯಪ್ಪ, ಮುನಿರಾಜು, ಮಂಜಣ್ಣ, ಸುಬ್ರಹ್ಮಣ್ಯ ನಾಯಕ್, ನಾಗರತ್ನಮ್ಮ, ಆರ್.ಸುಬ್ರಹ್ಮಣ್ಯ, ಭ್ರಮರಾಂಬಿಕ ಮುತ್ತಣ್ಣ, ಎಸ್.ಆರ್.ಮುನಿರಾಜು, ದೇವಾಲಯದ ಬಿಲ್ ಕಲೆಕ್ಟರ್ ಪಿ.ನಂಜಪ್ಪ ಪ್ರಧಾನ ಅರ್ಚಕ ಆರ್.ಸುಬ್ರಮಣ್ಯ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !