ಸೋಮವಾರ, ಅಕ್ಟೋಬರ್ 21, 2019
26 °C

ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ ಗಾಂಧಿ

Published:
Updated:
Prajavani

ವಿಜಯಪುರ: ರಾಷ್ಟ್ರಪಿತ ಮಹಾತ್ಮಾಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಇಲ್ಲಿನ 3ನೇ ವಾರ್ಡಿನ ಬಸವೇಶ್ವರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಗಾಂಧಿಜಯಂತಿ ಆಚರಿಸಲಾಯಿತು.

ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಆಂಜಿನಪ್ಪ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಗಾಂಧೀಜಿ ಅವರು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡುವುದರ ಜೊತೆಗೆ ಗ್ರಾಮ ಸ್ವರಾಜ್ಯ ಕಲ್ಪನೆಯ ಮೂಲಕ ಗ್ರಾಮೀಣ ಗುಡಿ ಕೈಗಾರಿಕೆಗಳ ಅಭಿವೃದ್ಧಿ ಕುರಿತು ಪ್ರತಿಪಾದಿಸಿದರು. ಅವರ ಆಶಯಗಳನ್ನು ನಾವು ಅನುಷ್ಠಾನಗೊಳಿಸಬೇಕಾದರೆ ಪುನಃ ಅವರನ್ನು ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಮುಖ್ಯಶಿಕ್ಷಕ ಮುನಿಆಂಜಿನಪ್ಪ ಮಾತನಾಡಿ, ‘ದೇಶದಲ್ಲಿ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸುವುದಕ್ಕಿಂತಲು ಮುಂಚಿತವಾಗಿ 200 ವರ್ಷಗಳ ಹಿಂದೆಯೇ ಸ್ವಾತಂತ್ರ್ಯ ಚಳವಳಿ ನಡೆದಿತ್ತು. ಆದರೆ ಗಾಂಧೀಜಿ ಅವರ ನಾಯಕತ್ವದ ತರುವಾಯ ಆ ಹೋರಾಟಕ್ಕೆ ಹೊಸರೂಪ ಬಂತು. ದೇಶ ಪರ್ಯಟನೆಗೆ ಮುಂದಾದ ಗಾಂಧೀಜಿ ಅವರು ನಮ್ಮ ರಾಜ್ಯಕ್ಕೆ ಕೂಡ 8 ಬಾರಿ ಭೇಟಿ ನೀಡಿದ್ದರು. ಸರಳತೆ ಮೈಗೂಡಿಸಿಕೊಂಡಿದ್ದ ಅವರು ಜನಸಾಮಾನ್ಯರ ಜತೆ ಸ್ಪಂದಿಸುತ್ತಿದ್ದರು’ ಎಂದರು.

ಶಿಕ್ಷಕ ಮುನಿಯಪ್ಪ ಮಾತನಾಡಿದರು. ಪ್ರಮೀಳಮ್ಮ, ದೇವರಾಜ್, ಕೃಷ್ಣಪ್ಪ, ರುಕ್ಮಿಣಿಯಮ್ಮ, ಹರೀಶ್, ಮಾಲತಿ, ಮಂಜುಳಮ್ಮ, ಸುಕನ್ಯಾ, ಸತ್ಯಮ್ಮ, ಪದ್ಮಾವತಿ, ಶಾಂತಮ್ಮ ಇದ್ದರು.

Post Comments (+)