ವಿಶ್ವಮಾನ್ಯ ಗಾಂಧಿ ಸಿದ್ದಾಂತ

7

ವಿಶ್ವಮಾನ್ಯ ಗಾಂಧಿ ಸಿದ್ದಾಂತ

Published:
Updated:
Deccan Herald

ದೇವನಹಳ್ಳಿ: ರಾಷ್ಟ್ರದ ಏಕೈಕ ಪಿತಾಮಹ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ದಾಂತಗಳು ವಿಶ್ವಮಾನ್ಯವಾಗಿ ಹೋರಾಟಗಾರರಿಗೆ ಸ್ಫೂರ್ತಿಯಾಗಿವೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಶಾಸಕ ಕಚೇರಿಯಲ್ಲಿ ಗಾಂಧೀಜಿ 150ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅವರ ಉಪವಾಸ ಸತ್ಯಾಗ್ರಹ, ಸ್ವದೇಶಿ ಚಳವಳಿ, ಉಪ್ಪಿನ ಹರತಾಳ, ಭಾರತ ಬಿಟ್ಟು ತೊಲಗಿ ಚಳವಳಿಗಳು ಅಹಿಂಸೆಯಿಂದ ನಡೆಸಿದ ಹೋರಾಟಗಳಿಗೆ ಬ್ರಿಟಿಷರು ತತ್ತರಿಸಿ ಹೋಗಿದ್ದರು ಎಂದರು.

ಭಾರತ ದೇಶಕ್ಕೆ ಅವರ ಚಳವಳಿ ಸೀಮಿತವಾಗಿರಲಿಲ್ಲ. ವಿಶ್ವಮಟ್ಟದಲ್ಲಿಯೂ ಚರ್ಚಿತವಾಗಿದ್ದವು. ಹೋರಾಟದ ವಿವಿಧ ರೂಪಗಳನ್ನು ಕಂಡ ಆನೇಕ ರಾಷ್ಟ್ರಗಳು ಬ್ರಿಟೀಷರ ಮೇಲೆ ಒತ್ತಡ ಹಾಕಿ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸಿದ್ದವು ಎಂದರು.

‘ಅವರ ರಾಮ ರಾಜ್ಯದ ಪರಿಕಲ್ಪನೆಯನ್ನೇ ಮೂಲೆಗೂಂಪು ಮಾಡಲಾಗಿದೆ. ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರವಾಗಿದ್ದು ಅದರ ಮೂಲಕ ಗಾಂಧೀಜಿ ಕನಸು ನನಸು ಮಾಡಬೇಕು. ಅದರ್ಶಗಳು, ತತ್ವ ಸಿದ್ಧಾಂತಗಳು ಯುವ ಸಮುದಾಯ ಆಳವಡಿಸಿಕೊಳ್ಳಬೇಕು. ಅವರು ಅನುಸರಿಸಿದ ಮಾರ್ಗದಲ್ಲಿ ನಡೆಯಬೇಕು. ರಾಷ್ಟ್ರ ಪಿತನಿಗೆ ಪ್ರತಿಯೊಬ್ಬರೂ ಗೌರವ ಪೂರ್ವಕವಾಗಿ ನಮಿಸಬೇಕಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !