ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಡ್ಲಚಿಂತೆ: 24 ಕುರಿ ಕಳವು

Last Updated 20 ಅಕ್ಟೋಬರ್ 2022, 5:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಶ್ರೀನಿವಾಸ ಮತ್ತುಜಿ.ವಿ ವೆಂಕಟರಾಯಪ್ಪ ಎಂಬುವರ ಒಟ್ಟು 24 ಕುರಿಗಳ ಕಳ್ಳತನ ನಡೆದಿದೆ. ಈ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಮ್ಮ ಮನೆಯಲ್ಲಿ ಒಟ್ಟು 14 ಮತ್ತು ಜಿ.ವಿ.ವೆಂಕಟರಾಯಪ್ಪ ಅವರ ಮನೆಯಲ್ಲಿ 10 ಕುರಿಗಳು ಇವೆ. ಈ ಎಲ್ಲ ಕುರಿಗಳನ್ನು ನಿತ್ಯ ವೆಂಕಟರಾಯಪ್ಪ ಮೇಯಿಸುತ್ತಿದ್ದರು. ಮಂಗಳವಾರ ಸಂಜೆ ಕುರಿಗಳನ್ನು ನಮ್ಮ ಮನೆಯಲ್ಲಿ ಬಿಟ್ಟು ಹೋದರು. ಬುಧವಾರ ಬೆಳಗಿನ ಜಾವ 3 ಸುಮಾರಿನಲ್ಲಿ ನಾನು ಕುರಿಗಳ ಶೆಡ್‌ಗೆ ಹೋಗಿ ನೋಡಿದರೆ ಯಾರೊ ಬೀಗ ಜಖಂಗೊಳಿಸಿ ನನ್ನ 14 ಕುರಿಗಳನ್ನು ಕಳ್ಳತನ ಮಾಡಿದ್ದರೆ. ಇದೇ ದಿನ ವೆಂಕಟರಾಯಪ್ಪ ಅವರ 10 ಕುರಿಗಳನ್ನೂ ಕಳ್ಳತನ ಮಾಡಿದ್ದಾರೆ.

ಇವುಗಳ ಒಟ್ಟು ಮೌಲ್ಯ ₹ 1.68 ಲಕ್ಷವಾಗಿದೆ ಎಂದು ಶ್ರೀನಿವಾಸ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT