‘ಕನ್ನಡ ಭಾಷೆಗೆ ಜಾಗತೀಕರಣದ ಕರಿಛಾಯೆ’

7
ಕನ್ನಡದ ಪ್ರಾಚೀನತೆ, ಏಕೀಕರಣದ ಹಾದಿ ಬಗ್ಗೆ ತಿಳಿಯುವುದು ಅಗತ್ಯ

‘ಕನ್ನಡ ಭಾಷೆಗೆ ಜಾಗತೀಕರಣದ ಕರಿಛಾಯೆ’

Published:
Updated:
Deccan Herald

ವಿಜಯಪುರ: ಕನ್ನಡ ಭಾಷೆಯು ಒಂದು ಸಂಸ್ಕೃತಿ. ಈ ಭಾಷೆ ಪ್ರಾಚೀನತೆ ಮತ್ತು ಏಕೀಕರಣದ ಹಾದಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಎ. ಚಿನ್ನೇಗೌಡ ಹೇಳಿದರು.

ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಶನಿವಾರ ವಿಜಯಪುರದ ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ‘50ನೇ ಕನ್ನಡ ಜ್ಯೋತಿ’ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಭಾಷೆ, ನೆಲ–ಜಲ ಉಳಿಯ ಬೇಕಾದರೆ ಕನ್ನಡಪರ ಸಂಘಟನೆಗಳು ಗಡಿ ಭಾಗಗಳಲ್ಲಿ ಭಾಷೆ ಬಗೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕನ್ನಡ ಏಕೀಕರಣದಲ್ಲಿ ಹಲವಾರು ಸಾಹಿತಿಗಳು ಹಾಗೂ ಹೋರಾಟಗಾರರ ಪರಿಶ್ರಮವಿದೆ. ಇಂದಿಗೂ ಗಡಿ ಸಮಸ್ಯೆ ಎದುರಿಸುತ್ತಿದ್ದೇವೆ. ಮಾತೃ ಭಾಷೆ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು’ ಎಂದು ಅವರು ಹೇಳಿದರು.

ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಕನ್ನಡ ಆಂಜಿನಪ್ಪ ಮಾತನಾಡಿ, ರಾಜ್ಯದ ಗಡಿಭಾಗಗಳಲ್ಲಿ ಅನ್ಯ ಭಾಷೆಗಳಿಂದ ಕನ್ನಡ ಅವನತಿ ತಲುಪುತ್ತಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತೆಲುಗು ಪ್ರಭಾವದಿಂದ ಜನರು ಕನ್ನಡ ಮರೆಯುವಂತಾಗಿದೆ. ಪರಭಾಷೆಗಳ ಹಾವಳಿಯಿಂದ ಕನ್ನಡ ಭಾಷೆ ಅನಾಥವಾಗುತ್ತಿದೆ. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಜಾಗತೀಕರಣದ ಕರಿಛಾಯೆ ಬಿದ್ದಿದೆ. ಅದರ ಉಳಿವಿಗೆ ಶ್ರಮಿಸಬೇಕಾದ ಅನಿವಾರ್ಯತೆ ಈಗ ಹೆಚ್ಚಿದೆ. ಕನ್ನಡ ಭಾಷೆಯ ಶ್ರೀಮಂತಿಕೆ ಪರಿಚಯಿಸುವ ಉದ್ದೇಶದಿಂದ ಸಂಘದ ಮುಖಾಂತರ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ಸಂಸ್ಥಾಪಕ ಎ. ಮಂಜುನಾಥ್ ಮಾತನಾಡಿ, ‘ಮಾತೃ ಭಾಷೆಯನ್ನು ನಾವೆಂದಿಗೂ ಮರೆಯಬಾರದು. ಅನ್ಯಭಾಷೆಗಳ ಪ್ರಭಾವದಿಂದ ನಮ್ಮ ಭಾಷೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಾ
ದುದು ನಮ್ಮೆಲ್ಲರ ಜವಾಬ್ದಾರಿ. ನಮಗೆ ಎಲ್ಲ ಭಾಷೆಗಳು ಅಗತ್ಯ. ಆದರೆ ಮಾತೃ ಭಾಷೆಗೆ ನಾವು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ’ ಎಂದು ಅವರು ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಎ. ಚಿನ್ನೇಗೌಡ, ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಕನ್ನಡ ಆಂಜಿನಪ್ಪ ಅವರನ್ನು ಸನ್ಮಾನಿಸಿದರು.

ಚಲನಚಿತ್ರ ವಿತರಕ ಶ್ರೀಧರ ಶಾಮನೂರು, ನಿರ್ಮಾಪಕ ರಾಮನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಾ ನಾಯಕ್, ತುಳಸಿನಾಯಕ್, ವರ್ಷಿಣಿ, ಮಂಜುನಾಥ್, ವಕೀಲೆ ಎನ್. ಸುಮತಿಬಾಯಿ, ಉದಯಶಂಕರ್ ರಾವ್, ಕೆ. ಮಹದೇವಪ್ರಸಾದ್, ಮಹೇಂದ್ರ, ಮಾಸ್ಟರ್ ದೈವಿಕ್ ನಿವೇದ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !