ಭಾನುವಾರ, ಡಿಸೆಂಬರ್ 15, 2019
26 °C

ಸಮಸ್ಯೆ ನಿವಾರಣೆಗೆ ಪ್ರಯತ್ನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: ‘ಜನಸ್ಪಂದನ’ ಸಮಸ್ಯೆಗಳ ನಿವಾರಣೆಗೆ ಒಂದು ಉತ್ತಮ ಪ್ರಯತ್ನ. ಈ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದಾರೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ನಮಗೆ ಜ್ವಲಂತ ಸಮಸ್ಯೆಗಳಾದ ಕಲ್ಲು ಗಣಿಗಾರಿಕೆ ನಿಷೇಧವಾಗಬೇಕು.
-ಮುದ್ದನಾಯಕನಹಳ್ಳಿ ರಮೇಶ್

*
ಆರು ತಿಂಗಳಿಗೊಮ್ಮೆ ನಡೆಯಲಿ

ದೇವನಹಳ್ಳಿ: ಪ್ರತಿ ಆರು ತಿಂಗಳಿಗೊಮ್ಮೆ ಜನಸ್ಪಂದನ ನಡೆದರೆ ಆನೇಕ ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗಲಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಪತ್ರಿಕೆ ಮಾಡಿದೆ ಶ್ಲಾಘನೀಯ. ವೇದಿಕೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳು ಹಾಗೂ ಸಲಹೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.
-ಸೂರ್ಯಕಲಾ, ಮಹಿಳಾ ಗ್ರಾಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ

*
ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ
ದೇವನಹಳ್ಳಿ:
ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಇಂಥ ಪ್ರಯತ್ನ ಪ್ರಯೋಜನಕಾರಿಯಾಗಬೇಕು. ಒಂದು ದಿನ ಸಮಸ್ಯೆಗಳ ಚರ್ಚಗೆ ಮಿಸಲಿಟ್ಟಿದ್ದರೆ ಮತ್ತಷ್ಟು ದೂರುಗಳಿಗೆ ಸ್ಪಂದನೆ ಸಿಗುವ ನಿರೀಕ್ಷೆ ಇತ್ತು.
-ಗೊಡ್ಲುಮುದ್ದೇನಹಳ್ಳಿ ಮುನಿರಾಜು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು