ಹೊಸಕೋಟೆ: ಬೆಳಕಿನ ಹಬ್ಬಕ್ಕೆ ಸಡಗರ

ಹೊಸಕೋಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ದೀಪಾವಳಿ ಹಬ್ಬದ ಸಡಗರ ಮಾತ್ರ ಜನತೆಯಲ್ಲಿ ಕಡಿಮೆಯಾಗಿಲ್ಲ.
ನಗರದ ಎಲ್ಲಾ ದಿನಸಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ಕೆಂಪಕ್ಕಿ, ದೀಪದ ಎಣ್ಣೆ ಖರೀದಿಸುತ್ತಿದ್ದ ದೃಶ್ಯ ಬುಧವಾರ ಕಂಡುಬಂದಿತು. ರಸ್ತೆ ಪಕ್ಕದಲ್ಲಿ ಹೂವು, ಹಣತೆ, ಹಸಿ ಅಡಿಕೆಗಾಗಿ ಜನರು ಗುಂಪು ಗುಂಪಾಗಿ ಸೇರಿದ್ದರು.
ನಗರದ ಕೆ.ಆರ್. ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದರೂ ಅಲ್ಲಿಯೇ ಬೀದಿ ಬದಿಯಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಕಳೆದ ವರ್ಷ ಕೊರೊನಾದಿಂದಾ ಜನತೆ ಹಬ್ಬವನ್ನು ಸರಳವಾಗಿ ಆಚರಿಸಿದ ಕಾರಣ ವ್ಯಾಪಾರಸ್ಥರಿಗೆ ನಿರೀಕ್ಷೆಯಷ್ಟು ಲಾಭ ಸಿಗದೆ ನಿರಾಶರಾಗಿದ್ದರು. ಈ ವರ್ಷ ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಜನತೆ ಉತ್ಸಾಹದಿಂದ ಹಬ್ಬದ ತಯಾರಿ ನಡೆಸುತ್ತಿರುವ ದೃಶ್ಯ ಕಾಣಿಸುತ್ತಿತ್ತು.
ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಜನರು ಸಂಚಾರ ದಟ್ಟಣೆಯನ್ನು ಅನುಭವಿಸಬೇಕಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.