ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಆಂಜನೇಯಸ್ವಾಮಿ ರಥೋತ್ಸವ

ಜಾನಪದ ಕಲಾತಂಡಗಳ ಮೆರವಣಿಗೆ ನೂರಾರು ಭಕ್ತರು ಭಾಗಿ
Last Updated 2 ಮಾರ್ಚ್ 2020, 11:42 IST
ಅಕ್ಷರ ಗಾತ್ರ

ವಿಜಯಪುರ: ಚನ್ನರಾಯಪಟ್ಟಣ ಹೋಬಳಿ ಹಂದರಹಳ್ಳಿಯಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಾಲಯದ 29ನೇ ವಾರ್ಷಿಕೋತ್ಸವ ಪ್ರಯುಕ್ತ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಹಂದರಹಳ್ಳಿ, ಹಿತ್ತರಹಳ್ಳಿ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಿಂದನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥದ ಮಿಣಿ ಎಳೆದರಲ್ಲದೆ, ಭಕ್ತಿ ಭಾವ ಸಮರ್ಪಿಸಿದರು. ರಥೋತ್ಸವದಲ್ಲಿಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಸಾಗಿದವು.ಮೂರು ದಿನಗಳ ಕಾಲಹೋಮ- ಹವನ, ಕಳಸ ಪೂಜೆ ಪ್ರತಿಷ್ಠಾಪನೆ, ಕುಂಭಾಭಿಷೇಕ, ತೊಟ್ಟಿಲು ಸೇವೆ, ಅಗ್ನಿಕುಂಡ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.‌ಅಂತಿಮ ದಿನ ಬ್ರಹ್ಮರಥೋತ್ಸವ ನಡೆಯಿತು.

ರಥೋತ್ಸವದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ದೇವಾಲಯದ ಅರ್ಚಕ ಕೆ.ಮುನಿಪೂಜಪ್ಪ, ಧಾರ್ಮಿಕ ಕಾರ್ಯಗಳು ಮಾನವನ ಜೀವನದ ಭಾಗವಾಗಿವೆ. ಅಧ್ಯಾತ್ಮ ಮಾನವನಲ್ಲಿ ಹೊಸ ಚೈತನ್ಯವನ್ನು ಉಂಟು ಮಾಡುವುದರ ಜೊತೆಗೆ ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚು ತೊಡಗಿಸಿಕೊಳ್ಳಬೇಕು. ಪೂರ್ವಿಕರು ಆಚರಿಸಿಕೊಂಡು ಬಂದಿರುವ ಆಚರಣೆಗಳಿಗೆ ಮನ್ನಣೆ ಇದ್ದು, ಇಂದಿನ ಯುವ ಸಮೂಹ ಅವುಗಳನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಎಂ.ಅರುಣ್, ಸಿ.ನರಸಿಂಹಪ್ಪ, ಕೆ.ಸತೀಶ್, ತಿಪ್ಪಣ್ಣ, ವೆಂಕಟೇಶಪ್ಪ, ರತ್ನಮ್ಮ, ಕಮಲಮ್ಮ, ದೇವಮ್ಮ, ಶಶಿಕಲಾ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT