ಮಠದ ಜೋಳಿಗೆಗೆ ದವಸ ಧಾನ್ಯ ಕಾಣಿಕೆ

7

ಮಠದ ಜೋಳಿಗೆಗೆ ದವಸ ಧಾನ್ಯ ಕಾಣಿಕೆ

Published:
Updated:
Deccan Herald

ಕನಕಪುರ: ತ್ರಿವಿಧ ದಾಸೋಹದ ಮೂಲಕ ಸಾಮಾಜಿಕ ಕೈಂಕರ್ಯವನ್ನು ನಡೆಸಿಕೊಂಡು ಬಂದಿರುವ ಮಠಗಳು ಸಾರ್ವಜನಿಕರ ಸಹಕಾರದಿಂದಲೇ ನಡೆಯಬೇಕು. ಮಠಗಳ ಪೀಠಾಧಿಪತಿಗಳು ಮನೆ ಮನೆಗೆ ತೆರಳಿ ಜೋಳಿಗೆಯಲ್ಲಿ ಭಿಕ್ಷೆ ಬೇಡುವ ಮೂಲಕ ಮಠಗಳನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ ಎಂದು ಮರಳೇಗವಿ ಮಠದ ಡಾ. ಮುಮ್ಮಡಿ ಶಿವರುದ್ರಸ್ವಾಮಿ ತಿಳಿಸಿದರು.

ಗೌರಿ ಹಬ್ಬದ ಸಮಯದಲ್ಲಿ ಭಕ್ತರ ಮನೆ ಮನೆಗೆ ತೆರಳಿ ಕೋರಣ್ಯ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

‘ಈ ಸಂಪ್ರದಾಯ ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳಿಂದ ಮಠಗಳಲ್ಲಿ ಮಠಾಧೀಶರು ಈ ಒಂದು ಕಾಯಕ ಮಾಡಿಕೊಂಡೇ ಬಂದಿದ್ದಾರೆ. ಮಠಗಳನ್ನು ಕಟ್ಟಿ ಬೆಳಸಿದ್ದಾರೆ. ಜನರಿಂದ ಸಂಗ್ರಹಿಸಿದ್ದನ್ನು ಜನರಿಗಾಗಿಯೇ ಸಮರ್ಪಿಸಿದ್ದಾರೆ’ ಎಂದರು.

‘ಎಷ್ಟೇ ನಾಗರಿಕತೆ ಬಂದರೂ ನಮ್ಮ ಸಮಾಜದ ಸಂಪ್ರದಾಯ, ಆಚಾರ ವಿಚಾರಗಳು ಬದಲಾಗುವುದಿಲ್ಲ. ಪ್ರತಿವರ್ಷವು ಶ್ರೀಮಠದ ಭಕ್ತರ ಮನೆಗಳಿಗೆ ತೆರಳಿ ಅವರಿಂದ ದವಸ ಧಾನ್ಯಗಳನ್ನು ಭಿಕ್ಷೆಯಾಗಿ ಸ್ವೀಕರಿಸಿ ಮಠದ ಜೋಳಿಗೆಯನ್ನು ತುಂಬಿಸುವುದು ನಮ್ಮ ಕಾಯಕವಾಗಿದೆ’ ಎಂದರು.

ಈ ಕೆಲಸದಲ್ಲಿ ಮಠದ ಎಲ್ಲ ಶಿಷ್ಯವೃಂದವು ಪಾಲ್ಗೊಂಡಿತ್ತು. ಗೌರಿ ಹಬ್ಬದಿಂದ ಮೂರು ದಿನಗಳ ಕಾಲ ಮಠದ ಸುತ್ತ ಇರುವಂತ ಗ್ರಾಮಗಳಿಗೆ ತೆರಳಿ ಕೋರಣ್ಯ ಮಾಡಿ ಭಕ್ತರಿಂದ ದವಸ, ಧಾನ್ಯ, ಕಾಣಿಕೆಯನ್ನು ಸ್ವೀಕರಿಸಿ ಶ್ರೀಮಠಕ್ಕೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !