ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜರಾಹೊಸಹಳ್ಳಿ: ಗ್ರಾ.ಪಂ ಫಲಿತಾಂಶ ಪ್ರಕಟ

ಮತ ಎಣಿಕೆ ಶಾಂತಿಯುತ
Last Updated 1 ಏಪ್ರಿಲ್ 2021, 7:29 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಮಾ.29 ರಂದು 14 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಬುಧವಾರ ನಡೆಯಿತು.

ತಹಶೀಲ್ದಾರ್ ಟಿ.ಎಸ್.ಶಿವರಾಜ್, ಚುನಾವಣಾಧಿಕಾರಿ ಸೋಮಶೇಖರ್,ಚುನಾವಣಾ ಶಿರಸ್ತೇದಾರ್ ಕಿರಣ್ ಕುಮಾರ್ ನೇತೃತ್ವ ವಹಿಸಿದ್ದರು.

ಒಟ್ಟು 18 ಸ್ಥಾನಗಳಿರುವ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವೀರಾಪುರ ಕ್ಷೇತ್ರದಿಂದ 4 ಜನ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾ ಅಂತಿಮ ಕಣದಲ್ಲಿ 41 ಮಂದಿ ಅಭ್ಯರ್ಥಿಗಳಿದ್ದರು.

ವಾರ್ಡ್‍ವಾರು ಫಲಿತಾಂಶದ ವಿವರ: ಮಜರಾಹೊಸಹಳ್ಳಿ - ಆರ್.ಮೀನಾ,ಎಂ.ಸುಷ್ಮಾ, ಎಚ್.ಜೆ.ಸಂದೇಶ್. ವೀರಾಪುರ (4 ಅವಿರೋಧ ಆಯ್ಕೆ) - ವಿಮಲ, ವಿಜಯಕುಮಾರ್, ಲೀಲಮ್ಮ, ವಿ.ಎಂ.ಶಿವಕುಮಾರ್. ತಿಪ್ಪಾಪುರ ವಾರ್ಡ್ 1- ಮಾರಪ್ಪ,ಸುನಂದಮ್ಮ, ಟಿ.ಪಿ.ಗಿರೀಶ್, ತಿಪ್ಪಾಪುರ ವಾರ್ಡ್‌ 2 - ಟಿ.ವೈ.ದೇವರಾಜು, ಲಕ್ಷ್ಮೀ, ಜಿಂಕೆಬಚ್ಚಹಳ್ಳಿ-ಮಹದೇವಮ್ಮ,ಲಕ್ಷ್ಮಮ್ಮ,ಬೈರೇಗೌಡ.ಹೊಸಹುಡ್ಯ-ಎಚ್.ಎ.ಆನಂದ್‌ಕುಮಾರ್, ಚಿಕ್ಕತುಮಕೂರು - ಗಂಗಮ್ಮ, ಬಿ.ಚಂದ್ರಹಾಸ ಚುನಾಯಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT