ಹಸಿರು ಮೇವು ಕೊರತೆ: ಆತಂಕ

ಭಾನುವಾರ, ಏಪ್ರಿಲ್ 21, 2019
27 °C

ಹಸಿರು ಮೇವು ಕೊರತೆ: ಆತಂಕ

Published:
Updated:
Prajavani

ವಿಜಯಪುರ: ಬಿಸಿಲಿನ ಕಾರಣದಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಕೊರತೆ ತೀವ್ರವಾಗಿ ಕಾಡುತ್ತಿದೆ. ರೈತರು ಪರದಾಡುವಂತಾಗಿದೆ ಎಂದು ರೈತ ಹನುಮೇಗೌಡ ಹೇಳಿದರು.

ಅಲ್ಪಸ್ವಲ್ಪ ನೀರು ಲಭ್ಯವಿರುವ ಆಂಧ್ರದ ಗಡಿಭಾಗಗಳಾದ ಗೌರಿಬಿದನೂರು, ಹಿಂದೂಪುರದ ಭಾಗಗಳಲ್ಲಿ ರೈತರು ಹಸಿರು ಮೇವು ಬೆಳೆದಿದ್ದಾರೆ. ಅಲ್ಲಿಂದ ಖರೀದಿ ಮಾಡಿಕೊಂಡು ಬಂದು ಕೆಲವರು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕ್ಷಣಾರ್ಧದಲ್ಲಿ ಮಾರಾಟ: ಜೋಳ ಬೆಳೆದವರು ಮಾರುಕಟ್ಟೆಗೆ ಬರಬೇಕಾಗಿಲ್ಲ. ಹೊಲಕ್ಕೆ ಖರೀದಿಸುವವರೇ ತೆರಳಿ ಇಡೀ ಜೋಳವನ್ನು ಖರೀದಿಸಿ ಕಟಾವು ಮಾಡಿ ಕೊಂಡೊಯ್ಯುತ್ತಾರೆ. ಇನ್ನೂ ಕೆಲವರು ರಸ್ತೆ ಬದಿ ನಿಲ್ಲಿಸಿದರೂ ನೋಡ ನೋಡುತ್ತಿದ್ದಂತೆಯೇ ಮೇವು ಖಾಲಿಯಾಗುತ್ತಿವೆ.

ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಮಾತನಾಡಿ, ಮೇವಿನ ಕೊರತೆ ಹೆಚ್ಚಾಗಿ ಕಾಡಲಾರಂಭಿಸಿದೆ. ಈಗ ಜಿಲ್ಲಾಡಳಿತ ಮೇವು ತರಿಸಿ ವಿತರಣೆ ಮಾಡುವ ಕಾರ್ಯಕ್ರಮವನ್ನೂ ಕೈಗೆತ್ತಿಕೊಂಡಿದೆ. 300 ಟನ್ ಮೇವಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !