’ಸಂಭ್ರಮಾಚರಣೆ ಬದಲು ಸಸಿ ನೆಟ್ಟು ಪೋಷಿಸಿ’

7

’ಸಂಭ್ರಮಾಚರಣೆ ಬದಲು ಸಸಿ ನೆಟ್ಟು ಪೋಷಿಸಿ’

Published:
Updated:
Deccan Herald

ಕನಕಪುರ: ಪ್ರಕೃತಿ ಮನುಷ್ಯನ ಎಲ್ಲ ಅಗತ್ಯತೆಯನ್ನು ಪೂರೈಸಿದೆ. ಆದರೆ ಮನುಷ್ಯನ ದುರಾಸೆಯನ್ನಲ್ಲ. ಅದನ್ನು ಅರಿತು ಸ್ವಾರ್ಥ ಬಿಟ್ಟು ಪ್ರಕೃತಿಯ ಉಳಿವಿಗೆ ಶ್ರಮಿಸಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ದಿನೇಶ್‌ ತಿಳಿಸಿದರು.

ತಾಲ್ಲೂಕಿನ ಬಟ್ಟಲುಗುಂಡಪ್ಪ ದೇವಾಲಯದ ಗಿರಿಯಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತನೆಯ ‘ವನ ಸಂವರ್ಧನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಜರು ಹೊಲ ಗದ್ದೆಗಳ ಅಕ್ಕ ಪಕ್ಕದಲ್ಲಿ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಗಿಡಮರಗಳನ್ನು ನೆಟ್ಟು ಬೆಳಸುವುದರ ಮೂಲಕ ಉತ್ತಮವಾದ ಪರಿಸರ ಕಾಪಾಡಿಕೊಂಡಿದ್ದರು ಎಂದು ತಿಳಿಸಿದರು.

ಪರಿಸರವು ಹಸಿರುಮಯವಾಗಿದ್ದರಿಂದ ಉತ್ತಮ ವಾತಾವರಣ ಹಾಗೂ ಆರೋಗ್ಯದೊಂದಿಗೆ ದೀರ್ಘಾಯುಷಿಗಳಾಗಿ ಬಾಳುತ್ತಿದ್ದರು. ಆದರೆ ಪ್ರಸ್ತುತ ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ ಎಂದರು.

ವಾತಾವರಣ ಕಲುಷಿತವಾಗುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ಎಲ್ಲರೂ ಅಲ್ಪಾಯುಷಿಯಾಗುತ್ತಿದ್ದಾನೆ. ಎಲ್ಲರೂ ನೈರ್ಮಲ್ಯ ಕಾಪಾಡಲು ಮುಂದಾಗಬೇಕು. ಮುಂದಿನ ಪೀಳಿಗೆಗೆ ಪ್ರಕೃತಿ ಸಂಪತ್ತನ್ನು ಉಳಿಸಬೇಕು ಎಂದು ತಿಳಿಸಿದರು.

ಬಿ.ಜಿ.ಎಸ್‌.ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಈರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಪ್ರಕೃತಿಯ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಸಲಹೆ ನೀಡದರು.

ಜನ್ಮದಿನ ಹಾಗೂ ಇತರ ವಿಶೇಷ ಸಂದರ್ಭದಲ್ಲಿ ವೈಭವದಿಂದ ಸಂಭ್ರಮಾಚರಣೆ ಮಾಡಿಕೊಳ್ಳುವುದರ ಬದಲು ಪ್ರಕೃತಿಯ ಉಳಿವಿಗೆ ಸಸಿ ನೆಟ್ಟು ಪೋಷಿಸಬೇಕು ಎಂದರು.

ದಾನ ಧರ್ಮಕ್ಕೂ ಮಿಗಿಲಾದದ್ದು ಸಸ್ಯ ಸಂಪತ್ತನ್ನು ಬೆಳೆಸಿ ಪೋಷಿಸುವುದು. ಇದರಿಂದ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ರಕ್ಷಿಸಿದಂತಾಗುತ್ತದೆ. ಪುಣ್ಯ ದೊರೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 600 ಶಾಲಾ ವಿದ್ಯಾರ್ಥಿಗಳು ಈ ಹಿಂದೆಯೇ ಶಾಲಾ ಆವರಣದಲ್ಲಿ ತಯಾರು ಮಾಡಿದ್ದ ಹತ್ತು ಜಾತಿಯ 2 ಸಾವಿರದಷ್ಟು ಬೀಜದುಂಡೆಗಳನ್ನು ಗಿರಿಯಲ್ಲಿ ಬಿತ್ತನೆ ಮಾಡಿದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲೆಯ ಎಲ್ಲ ಬೋಧಕರು ಮತ್ತು ಬೋಧಕೇತರರು, ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !