ಅತ್ತಿಬೆಲೆ(ಆನೇಕಲ್): ಅತ್ತಿಬೆಲೆ ಸಮೀಪದ ಗುಡ್ಡಹಟ್ಟಿಯಲ್ಲಿ ಆರಂಭ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರುನಾಡ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.

ಭರತನಾಟ್ಯ, ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಗೊಂಬೆ ಕುಣಿತ, ಕೋಲಾಟ, ಯಕ್ಷಗಾನ ಸೇರಿದಂತೆ 15ಕ್ಕೂ ಹೆಚ್ಚು ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದವು.

ನಗರೀಕರಣದ ಪ್ರಭಾವದಿಂದ ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಟಿವಿ, ಮೊಬೈಲ್ನಂತರ ವಸ್ತುಗಳಿಂದ ಯುವಕರು ಮಣ್ಣಿನ ಸೊಗಡಿನ ಮಹತ್ವನ್ನು ತಿಳಿಯುತ್ತಿಲ್ಲ. ಜಾನಪದ ಕಲೆಗಳ ಪ್ರದರ್ಶನದಿಂದ ಕಲೆಯ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಯುವಕರು ತಮ್ಮ ಸಮಯವನ್ನು ಕಲೆಗಳನ್ನು ಕಲಿಯಲು ಮೀಸಲಿಡಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಜಾನಪದ ಕಲೆಗಳ ಮಹತ್ವದ ಬಗ್ಗೆ ತಿಳಿಸಲು ಕರುನಾಡ ಜಾನಪದ ಸಂಭ್ರಮ ಉಪಯುಕ್ತವಾಗಿದೆ. ಯುವಕರಲ್ಲಿ ಜಾನಪದ ಸೊಗಡು ಕಡಿಮೆಯಾಗುತ್ತಿದೆ. ತಾತ್ಸಾರ ಮನೋಭಾವನೆ ಮೂಡುತ್ತಿದೆ. ಜಾನಪದ ಕಲೆಗಳನ್ನು ಪ್ರೋತ್ಸಾಹಿಸಲು ಜಾನಪದ ಸಂಭ್ರಮದಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ನಮ್ಮ ಮಣ್ಣಿನ ಸೊಗಡನ್ನು ಎಲ್ಲೆಡೆ ಪ್ರಚಾರಪಡಿಸಬೇಕು ಎಂದು ಆರಂಭ ಟ್ರಸ್ಟ್ನ ಕಾರ್ಯದರ್ಶಿ ಕೆ.ನಾಗರಾಜ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ಅಂಕುರ ಸಂಸ್ಥೆಯ ರಾಮಕೃಷ್ಣ, ಮಂಜುಳ, ಗಾಯಕ ರಾಜೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-15-1741808553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.