ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ ಗುಜರಾತ್‌

7
ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿಗಳಿಗೆ ಗುಜರಾತ್ ಪ್ರವಾಸ

ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ ಗುಜರಾತ್‌

Published:
Updated:
Deccan Herald

ದೇವನಹಳ್ಳಿ: ‘ನೋಡಿ ಕಲಿ ಮಾಡಿ ತಿಳಿ’ ಎಂಬ ನಾಣ್ಣುಡಿಯಂತೆ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರವಾಸದ ಅಗತ್ಯವಿದೆ ಎಂದು ಬಮೂಲ್ ಒಕ್ಕೂಟದ ಉಪಾಧ್ಯಕ್ಷ ಬಿ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿಯ ಒಕ್ಕೂಟ ಉಪ ಶಿಬಿರ ಕಚೇರಿ ಆವರಣದಲ್ಲಿ ಶನಿವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಗಳಿಗೆ 7 ದಿನಗಳ ಗುಜರಾತ್ ನ ಮದರ್ ಡೈರಿಗೆ ಪ್ರವಾಸಕ್ಕೆ ಬೀಳ್ಕೊಟ್ಟು ಮಾತನಾಡಿದರು.

ಹತ್ತು ವರ್ಷಗಳಿಂದ ಬರಿ ಹಾಲು ಉತ್ಪಾದಕ ರೈತರಿಗೆ ವಾರ್ಷಿಕವಾಗಿ ಎರಡು ಹಂತದಲ್ಲಿ ಶೈಕ್ಷಣಿಕ ಪ್ರವಾಸ ಕಳುಹಿಸಲಾಗುತ್ತಿತ್ತು. ಈಗ ಮೊದಲ ಪ್ರಯತ್ನವಾಗಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಹಾಲು ಉತ್ಪಾದಕರ ಸಂಘಗಳಿಗೆ ಭೇಟಿ ನೀಡಿ ಹಾಲಿನ ಗುಣಮಟ್ಟ, ಕೊಬ್ಬಿನಾಂಶ, ಗಣಕಯಂತ್ರ ನಿರ್ವಹಣೆ, ಸಂಘದಲ್ಲಿ ಆಡಳಿತ ನಿರ್ವಹಣೆ, ಹಾಲು ಉತ್ಪಾದಕರಿಗೆ ನೀಡಬೇಕಾದ ಮಾಹಿತಿ ಪ್ರತಿಯೊಂದನ್ನು ಪ್ರಾಯೋಗಿಕವಾಗಿ ತೊಡಗಿಸಿಕೊಂಡು ಅರ್ಥ ಮಾಡಿಕೊಳ್ಳಬೇಕು. ಅಂದಾಗ ಸಹಕಾರ ಸಂಘದಲ್ಲಿ ಗುಣಮಟ್ಟದ ಹಾಲಿನ ಜತೆಗೆ ಪಾರದರ್ಶಕ ಆಡಳಿತ ನಿರ್ವಹಣೆ ಉತ್ತಮಗೊಳ್ಳಲಿದೆ ಎಂದರು.

ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ ನಲ್ಲಿ ಹಾಲು ಉತ್ಪಾದನೆ ಕೇಂದ್ರ ಆರಂಭವಾದ ನಂತರ ದೇಶದಲ್ಲಿ ಕ್ಷೀರ ಕ್ರಾಂತಿ ಬೆಳವಣಿಗೆಯಾಗಿ ಲಕ್ಷಾಂತರ ರೈತರಿಗೆ ಹಾಲು ಉತ್ಪಾದನೆಯೇ ಆರ್ಥಿಕ ಮೂಲವಾಗಿದೆ. ಗುಜರಾತ್ ಕೇಂದ್ರ ಭಾಗದ ಡೈರಿಯಲ್ಲಿ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಕಾರ್ಯಾಗಾರ ನಡೆಸಿ ವಿಶ್ವದ ಮತ್ತು ದೇಶಿಯ ತಳಿ ಪಶುಗಳ ಪಾಲನೆ ಮತ್ತು ಹಾಲು ಉತ್ಪಾದನೆ ಹೆಚ್ಚಳ ಮಾಡಬಹುದಾದ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಪ್ರವಾಸಕ್ಕೆ ಒಕ್ಕೂಟ ₹ 3 ಲಕ್ಷ ಭರಿಸಲಿದೆ ಎಂದರು.

ಪ್ರವಾಸಕ್ಕೆ ಶುಭಕೋರಿ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ‘ಹಾಲು ಉತ್ಪಾದನೆಗೆ ಪ್ರಾಯೋಗಿಕ ಮಾಹಿತಿ ಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ತಾಂತ್ರಿಕತೆ ಹೆಚ್ಚುತ್ತಿದ್ದು ಪ್ರಯೋಗ ಎಂಬುದು ನಿರಂತರ, ಅಯಾ ಕಾಲ ಘಟ್ಟದಲ್ಲಿ ಅಗುವ ಬದಲಾವಣೆಗೆ ನಾವು ಒಗ್ಗಿಕೊಳ್ಳಬೇಕು’ ಎಂದರು.

ಶಿಬಿರ ಕಚೇರಿ ಉಪವ್ಯಸ್ಥಾಪಕ ಡಾ.ಗಂಗಯ್ಯ, ಸಹಾಯಕ ವ್ಯವಸ್ಥಾಪಕ ಡಿ.ಕೆ. ಮಂಜುನಾಥ್, ಮುನಿರಾಜು, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎನ್. ಲೋಕೇಶ್, ತಾಲ್ಲೂಕು ಘಟಕ ಅಧ್ಯಕ್ಷ ಎಚ್. ಚನ್ನಕೇಶವ, ಸದಸ್ಯ ವಿಜಯಕುಮಾರ್, ಮುಖಂಡ ಸುಬ್ಬೇಗೌಡ, ವೆಂಕಟೇಶ್ ಮೂರ್ತಿ ಇದ್ದರು.

ಒಟ್ಟು 31 ಕಾರ್ಯನಿರ್ವಹಣಾಧಿಕಾರಿಗಳ ತಂಡ ಗುಜರಾತ್‌ಗೆ ಪಯಣ ಬೆಳೆಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !