ತೂಬಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢ ಶಾಲೆಯ 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುಗಳ ಪಾದಪೂಜೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥಗೌಡ, 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳು ‘ನನ್ನ ಶಾಲೆ ನನ್ನ ಜವಾಬ್ದಾರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾವು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ, ₹50 ಸಾವಿರ ಮೌಲ್ಯದ ಶಾಲಾ ಪರಿಕರಗಳನ್ನು ನೀಡಿ ತಮ್ಮ ನೆಚ್ಚಿನ ಗುರುಗಳನ್ನು 25 ವರ್ಷದ ನಂತರ ಭೇಟಿ ಮಾಡಿ ಅಭಿನಂದಿಸಿರುವ ಶ್ಲಾಘನೀಯ ಎಂದರು.

ವಿಜ್ಞಾನ ಶಿಕ್ಷಕಿ ಶೋಭಾ, ವಿಜ್ಞಾನವನ್ನು ಜನರ ಪ್ರಗತಿಗಷ್ಟೇ ಬಳಸಬೇಕು. ನಿತ್ಯ ಜೀವನವನ್ನು ಉತ್ತಮ ಪರಿಸರದೊಂದಿಗೆ ಜೀವನ ಕಳೆಯಬೇಕು. ಉತ್ತಮ ಆರೋಗ್ಯವನ್ನು ಕಾಪಾಡಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಹಿರಿಯ ಕನ್ನಡ ಶಿಕ್ಷಕಿ ರೇಣುಕಾ ಭಟ್, ಇಂದಿರಾ, ಶೈಲಜಾ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಅನಂತಪದ್ಮನಾಭಶರ್ಮಾ, ಎ.ಆರ್.ಸುಬ್ಬರಾವ್, ಸಿ.ಕೆ.ಕೃಷ್ಣಪ್ಪ,ನಾರಾಯಣಪ್ಪ, ಮಂಜುನಾಥ್, ಗುಮಾಸ್ತರಾದ ಭಾಗ್ಯಮ್ಮ, ಹಳೆಯ ವಿದ್ಯಾರ್ಥಿಗಳಾದ ನವೀನ್, ಸುಬ್ರಹ್ಮಣ್ಯ, ಸಂಪತ್, ವೆಂಕಟೇಶ್, ಗಂಗರಾಜು. ಎನ್.ಶಿವಕುಮಾರ್, ಮಮತಾ, ಚೈತ್ರ, ಪಾರ್ವತಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.