ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟಿಷರಿಂದ ಗುರುಕುಲ ಶಿಕ್ಷಣಕ್ಕೆ ಪೆಟ್ಟು’

Last Updated 5 ಜುಲೈ 2022, 4:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ದೇಶದಲ್ಲಿ ನಿಜವಾದ ಇತಿಹಾಸ ಕಲಿಸುವ ಕೆಲಸ ಮಾಡದಿರುವುದು ಅತ್ಯಂತ ದುರಂತದ ಸಂಗತಿ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಬೌದ್ಧಿಕ್ ಪ್ರಮುಖ ಶ್ರೀಧರಸ್ವಾಮಿ ಹೇಳಿದರು.

ನಗರದ ಮುತ್ಯಾಲಮ್ಮದೇವಿ ದೇವಾಲಯದ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 5 ಲಕ್ಷ ಗುರುಕುಲಗಳಿದ್ದ ಸಂದರ್ಭದಲ್ಲಿ ಬ್ರಿಟಿಷರು ನಮಗೆ ಆಂಗ್ಲ ಶಿಕ್ಷಣ ಹೇರುವ ಮೂಲಕ ನಮ್ಮ ಶಿಕ್ಷಣ ಪದ್ಧತಿಯನ್ನು ಮೂಲೆಗುಂಪು ಮಾಡಿದರು. ಇಂಗ್ಲಿಷ್ ಶಿಕ್ಷಣದ ವ್ಯಾಮೋಹ ಇಂದಿನ ಜನರನ್ನು ಕಾಡುತ್ತಿದೆ. ಇದು ಆಂಗ್ಲರು ನಮಗೆ ಕಲಿಸಿರುವ ಮೌಢ್ಯ. ಇಂದಿಗೂ ರಾಮಾಯಣ, ಮಹಾಭಾರತ ತಿಳಿಸದೆ ಸುಳ್ಳಿನ ಕಥೆಗಳನ್ನು ತಿಳಿಸುವ ಮೂಲಕ ಜನರಲ್ಲಿ ಸನಾತನ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಸಲು ಹೋಗಿಲ್ಲ ಎಂದುತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಕೋಲಾರ ವಿಭಾಗದ ಜಿಲ್ಲಾ ಸಂಯೋಜಕ ದೊಡ್ಡತುಮಕೂರು ಆನಂದ್, ಸಮಿತಿ ಸಂಚಾಲಕ ಕೆ.ಎನ್. ಕೃಷ್ಣಪ್ಪ, ಪ್ರಾಂತ ಸಹ ಸಂಯೋಜಕಿ ಯಶೋದಮ್ಮ, ಸದಸ್ಯರಾದ ಶಿವನಂದರೆಡ್ಡಿ, ವತ್ಸಲಾ, ಲೀಲಾ ಮಹೇಶ್, ನವೀನ್, ಪ್ರಮೀಳಾ ಕೃಷ್ಣಪ್ಪ, ಯಶವಂತ, ವೆಂಕಟರಾಜು, ಶಿವಶಂಕರ್, ಕನಕರಾಜು, ಸುಬ್ರಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT