ಸೋಮವಾರ, ಆಗಸ್ಟ್ 15, 2022
24 °C
ನಿಧನವಾರ್ತೆ

ಹರಿಕಥೆ ವಿದ್ವಾಂಸ ವಿ.ಕೃಷ್ಣಮೂರ್ತಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಹರಿಕಥೆ ಮತ್ತು ನಾಟಕಗಳನ್ನು ನೂರಾರು ಮಂದಿಗೆ ಕಲಿಸಿದ್ದ, ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ವಿ.ಕೃಷ್ಣಮೂರ್ತಿ (89) ಶುಕ್ರವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.

ಕಾಶಿ ವಿಶ್ವೇಶ್ವರ ದೇಗುಲದೊಂದಿಗೆ ಭಾವುಕ ನಂಟು ಹೊಂದಿದ್ದರು. ದೇಗುಲಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಪುರೋಹಿತರು ಮತ್ತು ಭಜನೆ ಗುರುಗಳಾಗಿಯೂ ಜನಪ್ರಿಯರಾಗಿದ್ದರು.

ಆಕಾಶವಾಣಿ ಕಲಾವಿದರಾಗಿದ್ದ ಕೃಷ್ಣಮೂರ್ತಿ ಅವರು ಸಂಗೀತಗಾರರೂ ಹೌದು. ಪತ್ನಿ, ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.