ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಜನಜಾಗೃತಿ ಶಿಬಿರ

ಹುಸ್ಕೂರು: ಆಚಾರ್ಯ ಚರಕ ಜಯಂತಿ ಆಚರಣೆ
Last Updated 10 ಜುಲೈ 2022, 5:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಆಚಾರ್ಯ ಚರಕ ಜಯಂತಿ ಅಂಗವಾಗಿ ಆರ್ಯುಗ್ರಾಮ– ಆರೋಗ್ಯ ಜನಜಾಗೃತಿ ಶಿಬಿರ ನಡೆಯಿತು.

ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಹಲ್ಯ ಶರ್ಮಾ ಮಾತನಾಡಿ, ಆಯುರ್ವೇದದ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆಗಳು ಹೋಗಬೇಕಿದೆ. ನಮ್ಮ ಆರೋಗ್ಯ ಸುಧಾರಣೆಯಲ್ಲಿ ಆಯುರ್ವೇದ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಗ್ರಾಮದಲ್ಲಿ ಉಚಿತ ಯೋಗ, ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮದೊಂದಿಗೆ ಆಯುರ್ವೇದೋಕ್ತ ಜೀವನಶೈಲಿ ಬಗ್ಗೆ ಮಾಹಿತಿ ನೀಡಲಾಗುವುದು. ಮಕ್ಕಳ ಆರೋಗ್ಯ ಕುರಿತು ತಜ್ಞರಿಂದ ಮಾಹಿತಿ, ಶಾಲಾ ಮಕ್ಕಳಿಗೆ ವಿಶೇಷ ಚಟುವಟಿಕೆ, ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಔಷಧೀಯ ಸಸ್ಯ ನೆಡುವ ಕಾರ್ಯಕ್ರಮ, ಗ್ರಾಮ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ ರಾಘವೇಂದ್ರ, ಸದಸ್ಯ ಬಿ. ಮಂಜುನಾಥ್, ಮಕ್ಕಳ ತಜ್ಞ ಡಾ.ರಾಜು ಇದ್ದರು. ಅಭ್ಯುದಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT