ಶುಕ್ರವಾರ, ನವೆಂಬರ್ 27, 2020
23 °C

ನೈಸರ್ಗಿಕ ಆರೋಗ್ಯ ಕ್ರಮ ಅನುಸರಿಸಿ: ನ್ಯಾಚುರೋಪತಿ ಡಾ.ಅರುಣ್ ಶರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ನೈಸರ್ಗಿಕವಾಗಿ ಆರೋಗ್ಯ ಉಪಕ್ರಮ ಅನುಸರಿಸುವುದರಿಂದ ಕೋವಿಡ್ ತಡೆಗಟ್ಟಬಹುದು ಎಂದು ಅಂತರರಾಷ್ಟ್ರೀಯ ಮಹಾಯೋಗ ಸಂಸ್ಥೆ ಮತ್ತು ನ್ಯಾಚುರಲ್ ಹೈಜಿನ್ ಸಂಸ್ಥೆ ನಿರ್ದೇಶಕ ನ್ಯಾಚುರೋಪತಿ ಡಾ.ಅರುಣ್ ಶರ್ಮ ಅಭಿಪ್ರಾಯಪಟ್ಟರು.

ಇಲ್ಲಿನ ಐ.ವಿ.ಸಿ ರಸ್ತೆಯಲ್ಲಿರುವ ಸ್ಕೂಲ್ ಆಫ್ ಏನ್ಸಿಯಂಟ್ ವಿಸ್ಡಂ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ನೈಸರ್ಗಿಕ ಆಹಾರಕ್ರಮ ಮತ್ತು ಅನುಸರಿಸಬೇಕಾದ ನಿಯಮಗಳ ಐದು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ಆಹಾರ ಪದ್ಧತಿಯಲ್ಲಿ ಬದಲಾವಣೆ, ವಾತಾವರಣದಲ್ಲಿ ಏರುಪೇರು, ವಿಷಯುಕ್ತ ಗಾಳಿ –ನೀರು, ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಅದೇ ರೀತಿ ಪ್ರತಿ ಸಾಮಾನ್ಯ ಕಾಯಿಲೆಗೂ ಆಸ್ಪತ್ರೆಗಳಿಗೆ ದಂಬಾಲು ಬೀಳುವುದು, ವಿವಿಧ ರೋಗಗಳಿಗೆ ಅಹ್ವಾನ ನೀಡುವಂತಾಗಿದೆ ಎಂದು ಹೇಳಿದರು.

ನಿವೃತ್ತ ಐ.ಪಿ.ಎಸ್ ಅಧಿಕಾರಿ ವೆಂಕಟೇಶ್ ಮಾತನಾಡಿ, ಪಂಚಭೂತಗಳು ದೇಹದ ಒಳಗೂ ಇರುತ್ತವೆ. ಯೋಗ ಧಾನ್ಯದ ಮೂಲಕ ಅರ್ಥ ಮಾಡಿಕೊಂಡಾಗ ಆರೋಗ್ಯ ನಿರ್ವಹಣೆ ಸುಲಭವಾಗಲಿದೆ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.