ಆರೋಗ್ಯ ಶಿಬಿರ ಬಡವರಿಗೆ ಸಹಕಾರಿ  

7

ಆರೋಗ್ಯ ಶಿಬಿರ ಬಡವರಿಗೆ ಸಹಕಾರಿ  

Published:
Updated:
Deccan Herald

ದೊಡ್ಡಬಳ್ಳಾಪುರ: ಜನರನ್ನು ರೋಗಗಳಿಂದ ತಪ್ಪಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಜೆಡಿಎಸ್‌ ನಗರ ಎಸ್‌ಸಿ ಘಟಕದ ಅಧ್ಯಕ್ಷ ತಳವಾರ ನಾಗರಾಜ ಹೇಳಿದರು.

ನಗರದ ವೀರಭದ್ರನಪಾಳ್ಯದಲ್ಲಿ ಕರ್ನಾಟಕ ನವಚೇತನ ಯುವಕರ ಸಂಘದ ವತಿಯಿಂದ ನಡೆದ ‘ಆರೋಗ್ಯ ತಪಾಸಣಾ ಶಿಬಿರ’ದಲ್ಲಿ ಅವರು ಮಾತನಾಡಿದರು.

ಆರೋಗ್ಯ ಕೆಟ್ಟಾಗ ಎಲ್ಲರೂ ಆಸ್ಪತ್ರೆಗಳಿಗೆ ಹೋಗುವುದು ಸಾಮಾನ್ಯ. ಆದರೆ 40 ವರ್ಷ ಮೀರಿದ ಮೇಲೆ ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ದೊಡ್ಡ ಕಾಯಿಲೆಗಳಿಂದ ಬಳಲುವುದನ್ನು ತಪ್ಪಿಸಲು ಸುಲಭವಾಗಲಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್‌. ಪ್ರಭುದೇವ್‌, ಡಾ. ವಿಜಯಕುಮಾರ್‌, ನಗರಸಭೆ ಮಾಜಿ ಸದಸ್ಯ ಆಂಜನಮೂರ್ತಿ, ದಲಿತ ಮುಖಂಡ ಪಿ. ಮೂರ್ತಿ, ಸಂಘದ ಅಧ್ಯಕ್ಷ ಎಸ್‌. ಶಿವರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಖಜಾಂಚಿ ರಾಘವೇಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !