ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ

₹ 5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ
Last Updated 28 ನವೆಂಬರ್ 2022, 4:42 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಸ್ವಚ್ಛತೆಗಾಗಿ ಪ್ರತಿನಿತ್ಯ ದುಡಿಯುತ್ತಿರುವ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರಿಗೆ ದೇವನಹಳ್ಳಿ ಪುರಸಭೆಯಿಂದ ಒಂದು ವರ್ಷದ ಅವಧಿಗೆ ಎಸ್‌ಬಿಐ ಬ್ಯಾಂಕ್‌ ಸಹಯೋಗದಡಿ ಆರೋಗ್ಯ ವಿಮಾ ಕಾರ್ಡ್‌ಗಳನ್ನು ಇತ್ತೀಚೆಗೆ ಪುರಸಭಾ ಕಾರ್ಯಾಲಯದ ಆವರಣದಲ್ಲಿ ವಿತರಿಸಲಾಯಿತು.

ಅಧ್ಯಕ್ಷ ಗೋಪಮ್ಮ ಮಾತನಾಡಿ, ಪುರಸಭೆಯ ಶೇ 24.1ರಷ್ಟು ಯೋಜನೆಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಾಗಿದ್ದ ಹಣವನ್ನು ಅವರ ಆರೋಗ್ಯಕ್ಕೆ ವಿನಿಯೋಗಿಸಲಾಗಿದೆ. ಅವರಿಗೆ ನೆರವು ನೀಡಲು ಆರೋಗ್ಯ ವಿಮಾ ಕಾರ್ಡ್‌ ನೀಡಲಾಗಿದೆ ಎಂದು ಮಾಹಿತಿ
ನೀಡಿದರು.

ಸರ್ಕಾರದಿಂದ ಸಾಕಷ್ಟು ಸೇವೆಗಳು ಲಭ್ಯವಿದ್ದರೂ, ಆರ್ಥಿಕವಾಗಿ ಅಶಕ್ತರಾಗಿರುವ ಪೌರ ಕಾರ್ಮಿಕರಿಗೆ ಸುಸಜ್ಜಿತ ಆಸ್ಪತ್ರೆಯಲ್ಲಿ ₹ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್ ಸಹಕಾರಿಯಾಗಲಿದೆ. ಪುರಸಭೆಯಿಂದ ದಿನನಿತ್ಯ ಪೌರ ಕಾರ್ಮಿಕರಿಗೆ ಶುಚಿತ್ವದಿಂದ ಕುಡಿದ ಲಘು ಉಪಾಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯಾಧಿಕಾರಿ ದೊಡ್ಡಮಲವಯ್ಯ ಮಾತನಾಡಿ, ಪೌರ ಕಾರ್ಮಿಕರು ಪುರಸಭೆಯ ಸೈನಿಕರಿದ್ದಂತೆ. ಅವರಿಂದ ಮಾತ್ರವೇ ಇಡೀ ನಗರ ಸ್ವಚ್ಛವಾಗಿರಲು ಸಾಧ್ಯ ಎಂದರು.

ಯಾವುದೇ ಸಮಯದಲ್ಲಿಯೂ ಪೌರ ಕಾರ್ಮಿಕರು ಭೇಟಿ ಮಾಡಿ ಅವರ ಸಮಸ್ಯೆ ಕುರಿತು ಮಾತನಾಡಬಹುದು. ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಅವರು ಜನರ ಸೇವೆ ಮಾಡುತ್ತಿರುವ ಸೇವಕರಂತೆ ಎಲ್ಲರೂ ಭಾವಿಸಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷೆ ಗೀತಾ ಶ್ರೀಧರ್‌, ಸದಸ್ಯರಾದ ರುದ್ರೇಶ್‌, ಬಾಂಬೆ ನಾರಾಯಣಸ್ವಾಮಿ, ಕೋಡಿ ಮಂಚೇನಹಳ್ಳಿ ನಾಗೇಶ್‌, ರಘು, ರೇಖಾ ವೇಣುಗೋಪಾಲ್‌, ಮುಖಂಡರಾದ ಸೊಸೈಟಿ ಕುಮಾರ್‌, ಲಕ್ಷ್ಮೀನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT