ಹೆಬ್ಬಗೋಡಿ (ಆನೇಕಲ್): ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸೈಬರ್ ಕೇಂದ್ರದಲ್ಲಿ ನಕಲಿ ಆರ್ಸಿ ಕಾರ್ಡ್ ಸಿದ್ಧಪಡಿಸಿ, ಫೇಸ್ಬುಕ್ನಲ್ಲಿ ಜಾಹೀರಾತು ಹಾಕಿ ಕದ್ದ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ತಾಲ್ಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿ, ಅಂದಾಜು ₹41.67ಲಕ್ಷ ಮೌಲ್ಯದ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಯಶವಂತಪುರದ ಚಿತ್ತಪ್ಪಗಾರಿ ಆನಂದ (34) ಮತ್ತು ನಕಲಿ ಆರ್ಸಿ ಕಾರ್ಡ್ ತಯಾರಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಶೇಖ್ ಶಫೀರ್ ಬಾಷಾ (37) ಎಂದು ಗುರುತಿಸಲಾಗಿದೆ.

ಜ.4ರಂದು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಮೊಹಬೂಬ್ ಎಂಬುವವರಿಗೆ ಸೇರಿದ ಬಜಾಜ್ ಪಲ್ಸರ್ ವಾಹನ ಕಳವಾಗಿತ್ತು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಖಚಿತ ಮಾಹಿತಿ ಮೇರೆಗೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಚಿತ್ತಪ್ಪಗಾರಿ ಆನಂದನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮತ್ತಷ್ಟು ವಿಚಾರಿಸಿದಾಗ ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ಹೈದರಾಬಾದ್ ಏಜೆಂಟ್ ಸಹಾಯದಿಂದ ಸೈಬರ್ ಕೇಂದ್ರದಲ್ಲಿ ನಕಲಿ ಆರ್ಸಿ ಕಾರ್ಡ್ ಸಿದ್ಧಪಡಿಸಿ, ಫೇಸ್ಬುಕ್ನಲ್ಲಿ ಜಾಹೀರಾತು ಪ್ರಕಟಿಸುತ್ತಿದ್ದ.

ಆರೋಪಿಗಳನ್ನು ಬಂಧಿಸಿ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ಆರ್ಸಿ ಕಾರ್ಡ್ ತಯಾರಿಸುತ್ತಿದ್ದ ವ್ಯಕ್ತಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿ, ನಕಲಿ ದಾಖಲೆಗಳ ಸೃಷ್ಟಿಗೆ ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಮತ್ತು 501 ಆರ್ಸಿ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.

ದ್ವಿಚಕ್ರ ವಾಹನ ಕಳ್ಳ ಚಿತ್ತಪ್ಪಗಾರಿ ಆನಂದ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ 9 ಸೇರಿದಂತೆ ಒಟ್ಟು 14 ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದೆ. ಆಂಧ್ರಪ್ರದೇಶದ ಅನಂತಪುರಂ ಮತ್ತು ತಮಿಳುನಾಡಿನ ಫೇರ್ಲ್ಯಾಂಡ್ ಪೊಲೀಸ್ ಠಾಣೆಗಳಲ್ಲೂ ದ್ವಿಚಕ್ರ ವಾಹನ ಕಳವು ಪ್ರಕರಣಗಳಿವೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸ್ ಆಯುಕ್ತ ನಾರಾಯಣ್ ಮತ್ತು ಎಸಿಪಿ ಸತೀಶ್ ಮಾರ್ಗದರ್ಶನದಲ್ಲಿ ಹೆಬ್ಬಗೋಡಿ ಪೊಲೀಸ್ ಇನ್ ಸ್ಪೆಕ್ಟರ್ ಸೋಮಶೇಖರ್ ಜಿ, ಪಿಎಸ್ಐ ಸಂಜೀವ್ ನಾಯಕ್ ಹಾಗೂ ಸಿಬ್ಬಂದಿ ಪ್ರವೀಣ್, ಆನಂದ, ಸಂತೋಷ್, ವೇಣುಗೋಪಾಲ್, ಅಶೋಕ್ ಕುಮಾರ್, ಮುರುಳಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.