ಸೋಮವಾರ, ನವೆಂಬರ್ 30, 2020
24 °C

ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾಗಿ ನಂದಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ವಿ. ನಂದಿನಿ ಮತ್ತು ಉಪಾಧ್ಯಕ್ಷರಾಗಿ ಮುನಿಯಲ್ಲಪ್ಪ ಚುನಾಯಿತರಾಗಿದ್ದಾರೆ.

34 ಸದಸ್ಯ ಬಲದ  ಹೆಬ್ಬಗೋಡಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ತಲಾ 20 ಮತಗಳನ್ನು ಪಡೆಯುವ ಮೂಲಕ ನಂದಿನಿ ಮತ್ತು ಮುನಿಯಲ್ಲಪ್ಪ ಚುನಾಯಿತರಾದರು ಎಂದು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ತಿಳಿಸಿದರು.

ಹೆಬ್ಬಗೋಡಿಯು ಆನೇಕಲ್ ತಾಲ್ಲೂಕಿನ ಏಕೈಕ ನಗರಸಭೆಯಾಗಿದ್ದು, ಹಲವಾರು ಕೈಗಾರಿಕೆಗಳಿರುವ ಪ್ರದೇಶವಾಗಿದೆ. ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ನೂತನ ಅಧ್ಯಕ್ಷೆ ನಂದಿನಿ ಹೇಳಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.